alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯಲಿದೆ ದರ್ಶನ್ ಹುಟ್ಟುಹಬ್ಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ಅಂದ್ರೆ ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ. ‘ಸಾರಥಿ’ಯ ಉತ್ಸವವನ್ನು ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬಕ್ಕೆ ಹೊಸ ಪ್ರಾಜೆಕ್ಟ್ ಗಳು ಘೋಷಣೆಯಾಗಲಿದೆ. ಅಲ್ಲದೇ ಅವರ 51 ನೇ ಚಿತ್ರದ ಟೈಟಲ್ ಲಾಂಚ್ ಮಾಡಲಾಗುತ್ತದೆ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ‘ಡಿ ಬಾಸ್ ಉತ್ಸವ’ ಜೋರಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆ ಮುಂದೆ ಅಭಿಮಾನಿಗಳ ಜಾತ್ರೆ ನಡೆಯಲಿದೆ. ಅಭಿಮಾನಿಗಳು ಶಿಸ್ತು, ಶಾಂತಿಯಿಂದ ಇರುವಂತೆ ದರ್ಶನ್ ಈಗಾಗಲೇ ತಿಳಿಸಿದ್ದಾರೆ.

ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ರೆಡಿಮಾಡಿಕೊಳ್ಳುತ್ತಿದ್ದಾರೆ. 15 ದಿನಗಳಿಂದಲೇ ದರ್ಶನ್ ಅಭಿಮಾನಿಗಳು ಸಿದ್ಧತೆ ಕೈಗೊಂಡಿದ್ದು, ಈ ಬಾರಿ ಹುಟ್ಟುಹಬ್ಬಕ್ಕೆ ಮತ್ತಷ್ಟು ಮೆರುಗು ಬಂದಿದೆ. ಮೊದಲ ಬಾರಿಗೆ ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಲೋಗೋ ಲಾಂಚ್ ಮಾಡಲಾಗಿದೆ. ‘ಡಿ ಉತ್ಸವ’ ಲೋಗೋ ರೆಡಿ ಮಾಡಲಾಗಿದ್ದು, ಅಭಿಮಾನಿಗಳ ಸಂಭ್ರಮ ಹೇಳತೀರದಾಗಿದೆ.

ನೆಚ್ಚಿನ ನಟನಿಗೆ ಶುಭಾಶಯ ಕೋರಲು ಅಭಿಮಾನಿಗಳ ಜಾತ್ರೆಯೇ ನೆರೆಯಲಿದ್ದು, ಸಂಭ್ರಮಾಚರಣೆಯ ಸಿದ್ಧತೆ ಜೋರಾಗಿದೆ. ನೆಚ್ಚಿನ ನಟನಿಗಾಗಿ ವಿಶೇಷ ಉಡುಗೊರೆ ಕೊಡಲು ಫ್ಯಾನ್ಸ್ ಕಾತರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...