alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣು ಮಿಟುಕಿಸದೆ ಪತಿಯನ್ನೇ ದಿಟ್ಟಿಸಿದ್ದಾರೆ ಅನುಷ್ಕಾ…!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಿರುವ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾವ್ಯಾತ್ಮಕ ವಿಶ್ಲೇಷಣೆಗಳ ಮಹಾಪೂರವೇ ಹರಿದು ಬಂದಿದೆ.

ಇತ್ತೀಚೆಗೆ ನಡೆದ ಖೇಲ್ ರತ್ನ ಪ್ರಶಸ್ತಿ ಪ್ರದಾನ ಸಮಾರಾಂಭದಲ್ಲಿ ಅನುಷ್ಕಾ ಶರ್ಮಾ ಪಾಲ್ಗೊಂಡಿದ್ದರು. ರಾಷ್ಟ್ರಪತಿಯವರು ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಅನುಷ್ಕಾ ಅವರು ಕೊಹ್ಲಿಯನ್ನೇ ತದೇಕ ಚಿತ್ತದಿಂದ ದಿಟ್ಟಿಸಿ ನೋಡುವ ಚಿತ್ರಗಳು ಕ್ಲಿಕ್ಕಿಸಲ್ಪಟ್ಟಿದ್ದು, ಆ ಚಿತ್ರ ಅವರ ಅಭಿಮಾನಿಗಳ ವರ್ಣರಂಜಿತ ವಿವರಣೆಗೆ ಕಾರಣವಾಗಿದೆ.

ಸಮಾರಂಭದ ಹತ್ತಾರು ಫೋಟೋಗಳು ಇವೆ, ಆದರೆ ಒಂದು ಫೋಟೋ ಮಾತ್ರ ಹೆಚ್ಚು ಸದ್ದು ಮಾಡಿದೆ. ‘ಎಂದೆಂದಿಗೂ ಇದು ಅತ್ಯ ತ್ತಮ ಜೋಡಿ’, ‘ಅವರು ಅತೀ ಕ್ಯೂಟ್’, ‘ಅನುಷ್ಕಾ ಮತ್ತು ವಿರಾಟ್ ದಿ ಬೆಸ್ಟ್’ ಹೀಗೆ ನೂರಾರು ಕಾಮೆಂಟ್ ಗಳು ಪೋಸ್ಟ್ ಆಗಿವೆ.

ಕಾರ್ಯಕ್ರಮದಲ್ಲಿ ವಿರಾಟ್ ಕಡು ನೀಲಿ ಬಣ್ಣದ ಬ್ಲೇಜರ್ ಹಾಗೂ ಬಿಳಿ ಶರ್ಟ್ ಧರಿಸಿದ್ದರೆ, ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದ ಕಪ್ಪು ಮತ್ತು ಚಿನ್ನದ ಬಣ್ಣದ ಧಿರಿಸನ್ನು ಅನುಷ್ಕಾ ತೊಟ್ಟು ಗಮನ ಸೆಳೆದಿದ್ದರು.

View this post on Instagram

#viratkohli with #anushkasharma 😍

A post shared by Viral Bhayani (@viralbhayani) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...