alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯ ಯೋಗಾಸನದ ಫೋಟೋ ನೋಡಿ ಬೆರಗಾಗಿದ್ದಾರೆ ಫ್ಯಾನ್ಸ್

ನಟಿ ಸೋಹಾ ಅಲಿ ಖಾನ್ ತಾಯಿಯಾಗ್ತಿದ್ದಾರೆ. ಸೋಹಾ ಪತಿ ಕುಣಾಲ್ ಖೇಮು ಈ ಗುಡ್ ನ್ಯೂಸ್ ಹೇಳಿದಾಗಿನಿಂದ್ಲೂ ಅಭಿಮಾನಿಗಳಲ್ಲಿ, ಕುಟುಂಬದವರಲ್ಲಿ ಹೊಸ ಅತಿಥಿಯ ಆಗಮನಕ್ಕಾಗಿ ಕಾತರ ಹೆಚ್ಚಾಗಿದೆ. ಮೊನ್ನೆಯಷ್ಟೆ ಸೋಹಾ ಅಲಿ ಖಾನ್ ಸೀಮಂತ ಕೂಡ ನೆರವೇರಿದೆ.

ಸದ್ಯದಲ್ಲೇ ಅಮ್ಮನಾಗಿ ಪ್ರಮೋಷನ್ ಪಡೆಯುತ್ತಿರುವ ಸೋಹಾ, ಪ್ರೆಗ್ನೆನ್ಸಿಯನ್ನು ಸಖತ್ತಾಗೇ ಎಂಜಾಯ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಕೂಡ ಶೇರ್ ಮಾಡ್ತಿದ್ದಾರೆ. ಸೋಹಾಳ ಯೋಗಾಸನದ ಫೋಟೋ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.

ಈ ಫೋಟೋದಲ್ಲಿ ಸೋಹಾ ತಮ್ಮ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. ಜೊತೆಗೆ ಗರ್ಭಾವಸ್ಥೆಯಲ್ಲೂ ಫಿಟ್ನೆಸ್ ಎಷ್ಟು ಮುಖ್ಯ ಅನ್ನೋ ಸಂದೇಶ ಸಾರಿದ್ದಾರೆ. ತುಂಬು ಗರ್ಭಿಣಿಯಾಗಿದ್ರೂ ಯಾವುದೇ ಹಿಂಜರಿಕೆ ಇಲ್ಲದೆ ವಿವಿಧ ಆಸನಗಳನ್ನು ಮಾಡಿದ್ದಾರೆ.

ಕೆಲವರು ಸೋಹಾ ಅಲಿಖಾನ್ ಯೋಗಾಸನದ ಫೋಟೋ ಪೋಸ್ಟ್ ಮಾಡಿರೋದಕ್ಕೆ ಆಕ್ಷೇಪಿಸಿದ್ದಾರೆ. ಇದೆಲ್ಲಾ ಪಬ್ಲಿಸಿಟಿ ಸ್ಟಂಟ್ ಅಂತಾನೂ ಟೀಕಿಸಿದ್ದಾರೆ. ಸೋಹಾ ತಮ್ಮ ಬೇಬಿ ಬಂಪ್ ಪ್ರದರ್ಶಿಸಿದ್ದೇ ಮಹಾಪರಾಧ ಎಂಬಂತೆ ರಿಯಾಕ್ಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...