alex Certify
ಕನ್ನಡ ದುನಿಯಾ       Mobile App
       

Kannada Duniya

19 ವರ್ಷಗಳ ನಂತ್ರ ಅನಿಲ್ ಕಪೂರ್ ಮಗಳ ಪಾತ್ರದಲ್ಲಿ ಐಶ್

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಹಾಗೂ ನಟಿ ಐಶ್ವರ್ಯ ರೈ ಬಚ್ಚನ್ ಮತ್ತೆ ತೆರೆ ಮೇಲೆ ಒಂದಾಗಲಿದ್ದಾರೆ. 19 ವರ್ಷಗಳ ನಂತ್ರ ಐಶ್-ಅನಿಲ್ ಫನ್ನಿ ಖಾನ್ ಚಿತ್ರದಲ್ಲಿ ನಟಿಸಿದ್ದಾರೆ. ಜೂನ್ 24ರಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ.

ಶೀಘ್ರವೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಟೀಸರ್ ನಲ್ಲಿ ಐಶ್ವರ್ಯ ಮಿಂಚಲಿದ್ದಾರಂತೆ. ಚಿತ್ರದಲ್ಲಿ ಅನಿಲ್ ಕಪೂರ್, ಐಶ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಅತುಲ್ ಮಂಜ್ರೇಕರ್ ನಿರ್ದೇಶನದ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ದಿವ್ಯಾ ದತ್ತಾ, ಕರಣ್ ಮುಖ್ಯ ಪಾತ್ರದಲ್ಲಿದ್ದಾರೆ.

2000ರಲ್ಲಿ ಅನಿಲ್ –ಐಶ್ ಒಟ್ಟಿಗೆ ‘ಹಮಾರಾ ದಿಲ್ ಆಪಕೇ ಪಾಸ್ ಹೇ’ ಚಿತ್ರದಲ್ಲಿ ನಟಿಸಿದ್ದರು. 1999 ರಲ್ಲಿ ತೆರೆ ಕಂಡ ‘ತಾಲ್’ ಚಿತ್ರದಲ್ಲಿ ಕೂಡ ಐಶ್-ಅನಿಲ್ ಜೋಡಿಗೆ ಅಭಿಮಾನಿಗಳು ಉಘೇ ಎಂದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...