alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಆರಾಧ್ಯ ನೋಡಿದ್ದಾಳೆ ಅಮ್ಮನ ಸಿನಿಮಾ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅಭಿನಯದ ಫನ್ನಿ ಖಾನ್ ಜೂನ್ ಮೂರರಂದು ತೆರೆಗೆ ಬಂದಿದೆ. ಚಿತ್ರ ನಿರೀಕ್ಷೆಯಷ್ಟು ಗಳಿಕೆ ಮಾಡಿಲ್ಲ. ಆದ್ರೆ ಐಶ್ವರ್ಯ ರೈ ಬಚ್ಚನ್ ಗೆ ಈ ಚಿತ್ರ ವಿಶೇಷವಾದದ್ದು. ಯಾಕೆಂದ್ರೆ ಇದೇ ಮೊದಲ ಬಾರಿ ಮಗಳು ಆರಾಧ್ಯ ತಾಯಿ ಐಶ್ ಅಭಿನಯದ ಚಿತ್ರವನ್ನು ವೀಕ್ಷಣೆ ಮಾಡಿದ್ದಾಳೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿದ ಐಶ್ವರ್ಯ ಮಗಳ ಮೊದಲ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನೂ ತಿಳಿಸಿದ್ದಾರೆ.

ಆರಾಧ್ಯ ಟಿವಿಯಲ್ಲಿ ಅನೇಕ ಬಾರಿ ಐಶ್ವರ್ಯ ರೈ ನೋಡಿದ್ದಾಳಂತೆ. ಆದ್ರೆ ಇದೇ ಮೊದಲ ಬಾರಿ ಥಿಯೇಟರ್ ನಲ್ಲಿ ಪೂರ್ತಿ ಸಿನಿಮಾ ವೀಕ್ಷಣೆ ಮಾಡಿದ್ದಾಳಂತೆ. ಹಾಡೊಂದರ ಶೂಟಿಂಗ್ ಗೆ ಆರಾಧ್ಯ ಬಂದಿದ್ದಳಂತೆ. ಚಿತ್ರದ ಸ್ಕ್ರೀನಿಂಗ್ ನಡೆಯುತ್ತಿದೆ ಎಂಬುದು ಗೊತ್ತಾದಾಗ ಚಿತ್ರ ನೋಡುವ ಇಚ್ಛೆ ವ್ಯಕ್ತಪಡಿಸಿದ್ದಳಂತೆ. ತನ್ನ ಸ್ನೇಹಿತರು ಹಾಗೂ ಅವ್ರ ಪಾಲಕರ ಜೊತೆ ಚಿತ್ರ ನೋಡಿದ್ದು ಖುಷಿ ವಿಚಾರ ಎನ್ನುತ್ತಾರೆ ಐಶ್.

ಒಂದು ನಗುವಿನಲ್ಲಿ ಆರಾಧ್ಯ ಎಲ್ಲವನ್ನೂ ಹೇಳಿದ್ದಾಳೆ. ಈ ಚಿತ್ರವನ್ನು ಯಾವ ವಯಸ್ಸಿನವರಾದ್ರೂ ನೋಡಬಹುದು ಎನ್ನುತ್ತಾರೆ ಐಶ್. ಆರಾಧ್ಯ ಕೆಲಸವನ್ನು ಖುದ್ದು ಐಶ್ ಮಾಡ್ತಾರಂತೆ. ಆರಾಧ್ಯ ಬಳಿ ದಾದಿಯರಿಲ್ಲ. ಇಬ್ಬರನ್ನು ಇರಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಆದ್ರೆ ನನ್ನ ಮಗಳ ಕೆಲಸವನ್ನು ನಾನೇ ಮಾಡಬಯಸ್ತೇನೆಂದು ಐಶ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...