alex Certify
ಕನ್ನಡ ದುನಿಯಾ       Mobile App
       

Kannada Duniya

ಮಳಿಗೆ ಉದ್ಘಾಟನೆಗೆ ಬಂದ ‘ಬಾಹುಬಲಿ’ ನಟಿಗೆ ಕಹಿ ಅನುಭವ

ಹೈದರಾಬಾದ್: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹಿಮ್ಶಾತ್ ನಗರದಲ್ಲಿ ಆಭರಣ ಮಳಿಗೆ ಉದ್ಘಾಟನೆಗೆ ತಮನ್ನಾ ಆಗಮಿಸಿದ್ದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದು, ಅದು ಆಭರಣ ಮಳಿಗೆ ಸಿಬ್ಬಂದಿಯ ಮೇಲೆ ಬಿದ್ದಿದೆ.

ಚಪ್ಪಲಿ ಎಸೆದ ಕಿಡಿಗೇಡಿ ಕರೀಮ್ ಉಲ್ಲಾ ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಾನು ತಮನ್ನಾ ಅವರ ಅಭಿಮಾನಿಯಾಗಿದ್ದು, ಅವರು ಇತ್ತೀಚೆಗೆ ಸರಿಯಾಗಿ ನಟಿಸಿಲ್ಲವಾದ್ದರಿಂದ ರೋಸಿ ಹೋಗಿ ಚಪ್ಪಲಿ ಎಸೆದೆ ಎಂದು ಆತ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...