alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ‌ ಟ್ವೀಟ್ ಸೃಷ್ಟಿಸಿದ ಅವಾಂತರ ಇದೀಗ ವೈರಲ್

ಸಾಮಾನ್ಯವಾಗಿ ಯಾವುದೇ ಒಂದು ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಅದರ ಟ್ರೇಲರ್ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ನ್ನೇ ಹೇಳಿಬಿಟ್ಟರೆ??

ಹೌದು, ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರವಾಗಿರುವ ಝೀರೋ ಚಿತ್ರದ ಅಂತಿಮಘಟ್ಟದ ಕಥೆಯನ್ನು ಗಾಯಕ ಅದ್ನಾನ್ ಸಮಿ ಹೆಸರಿನ ನಕಲಿ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ಇದೀಗ ವಿವಾದದೊಂದಿಗೆ ವೈರಲ್ ಆಗಿದೆ‌.

ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ನಟನೆಯ ಝೀರೋ‌ ಚಿತ್ರದ ಕೊನೆಯಲ್ಲಿ, ಅನುಷ್ಕಾ ಸಾಯುತ್ತಾಳೆ. ಅವಳ ಕೊನೆಯಾಸೆ ಈಡೇರಿಸಲು ಶಾರುಖ್ ಗಗನಯಾತ್ರಿಯಾಗುತ್ತಾರೆ ಎಂದು ಅದ್ನಾನ್ ಸಮಿ‌ ಅವರ ಹೆಸರಿನಲ್ಲಿ ಟ್ವೀಟ್ ಭಾರಿ ಸದ್ದು ಮಾಡಿತ್ತು. ಆದರೀಗ ಇದೊಂದು ನಕಲಿ ಖಾತೆಯಾಗಿದ್ದು, ಇದಕ್ಕೂ‌ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಝೀರೋ ಚಿತ್ರದ ಟ್ರೇಲರ್ ನ ಅಂತ್ಯದಲ್ಲಿ‌ ಶಾರುಖ್ ಗಗನಯಾತ್ರಿಯ ದಿರಿಸಿನಲ್ಲಿ‌ ಮಿಂಚಿದ್ದಾರೆ. ಆದ್ದರಿಂದ ಕೆಲ‌ವರು ಈ ರೀತಿ ಚಿತ್ರದ ಅಂತ್ಯವನ್ನು ಊಹಿಸಿದ್ದಾರೆ ಎನ್ನಲಾಗಿದ್ದು, ಚಿತ್ರವನ್ನು ಆನಂದ್ ಎಲ್ ರೈ‌ ನಿರ್ದೇಶಿಸಿದ್ದು, ಹಿಮಾಂಶು ಶರ್ಮಾ ಅವರು ಬರೆದಿರುವ‌ ನಾಟಕ ಇದಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...