alex Certify
ಕನ್ನಡ ದುನಿಯಾ       Mobile App
       

Kannada Duniya

‘ನಟಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ನಟನ ಅಕ್ರಮ ಸಂಬಂಧ ಕಾರಣ’

ಕೊಚ್ಚಿ: ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ತನಿಖೆ ನಡೆಸಿದ್ದು, ನಟ ದಿಲೀಪ್ ಹೊಂದಿದ್ದ ಅಕ್ರಮ ಸಂಬಂಧವೇ ಘಟನೆಗೆ ಕಾರಣವಾಗಿದೆ ಎಂದು ಹೇಳಿದೆ.

ನಟ ದಿಲೀಪ್ ಮತ್ತೊಬ್ಬ ನಟಿ ಕಾವ್ಯ ಮಾಧವನ್(ಈಗ ದಿಲೀಪ್ ಪತ್ನಿ) ಅವರೊಂದಿಗೆ ಅಫೇರ್ ಹೊಂದಿದ್ದ ಕುರಿತಾಗಿ ದಿಲೀಪ್ ಅವರ ಹಿಂದಿನ ಪತ್ನಿ ಮಂಜು ವಾರಿಯರ್ ಗೆ ಸಂತ್ರಸ್ಥ ನಟಿ ಸಾಕ್ಷ್ಯವನ್ನು ತೋರಿಸಿದ್ದರು.

ತನ್ನ ಸಂಬಂಧದ ಕುರಿತು ಪತ್ನಿಗೆ ಮಾಹಿತಿ ನೀಡಿದ ನಟಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ನಟ ದಿಲೀಪ್, ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಜೊತೆ ಸೇರಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲು ಕಾರಣವಾಗಿದ್ದಾರೆ ಎಂದು ಹೇಳಲಾಗಿದೆ.

ಅಂಗಮಾಲಿ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಎಸ್.ಐ.ಟಿ. ವರದಿಯನ್ನು ನೀಡಿದ್ದು, 1652 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ದಿಲೀಪ್ ಮೊದಲ ಪತ್ನಿ ಮಂಜುವಾರಿಯರ್, ಈಗಿನ ಪತ್ನಿ ಕಾವ್ಯ ಮಾಧವನ್ ಅವರೂ ಸಾಕ್ಷಿಗಳೆಂದು ತಿಳಿಸಲಾಗಿದೆ.

ಸಂತ್ರಸ್ಥ ನಟಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹಿಂದಿನಿಂದಲೂ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...