alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಕಾಲಿವುಡ್ ಚಿತ್ರರಂಗದ ‘ಶಾಕಿಂಗ್’ ಸಂಗತಿ

ತಮಿಳು ಮತ್ತು ತೆಲುಗು ಸಿನಿಮಾ ನಟಿ ಶ್ರೀ ರೆಡ್ಡಿ ಸಿನಿ ಲೋಕದ ತೆರೆಮರೆಯ ಆಟಗಳ ಬಗ್ಗೆ ಹೇಳ್ತಿರೋ ವಿಚಾರಗಳನ್ನ ಅರಗಿಸಿಕೊಳ್ಳೋದಕ್ಕೆ ಸಿನಿ ರಂಗದ ಗಣ್ಯರು ಏದುಸಿರು ಬಿಡ್ತಿದ್ದಾರೆ. ಅಂತಾದ್ರಲ್ಲೇ ಕಾಲಿವುಡ್ ಸಿನಿ ರಂಗದಲ್ಲಿನ ಮತ್ತೊಂದು ವಿಚಾರ ಬಾಂಬ್ ನಂತೆ ಬಂದೆರಗಿದೆ.

ತಮಿಳು ಸೀರಿಯಲ್ ನಟಿಯರನ್ನ ವೇಶ್ಯಾವಾಟಿಕೆಗೆ ಬಳಸಿಕೊಳ್ತಿದ್ದ ಆರೋಪದಲ್ಲಿ ಇಬ್ಬರನ್ನ ಚೆನ್ನೈ ಪೊಲಿಸರು ಬಂಧಿಸಿದ್ದಾರೆ. ತಮಿಳು ಸೀರಿಯಲ್ ನಟಿ ಜಯಲಕ್ಷ್ಮಿ ಕೊಟ್ಟಂತಾ ದೂರಿನ ಅನ್ವಯ ವಿಚಾರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

ಕವಿ ಅರಸನ್ ಮತ್ತು ಮುರುಗನ್ ಪೆರುಮಾಳ್ ಎಂಬ ಇಬ್ಬರನ್ನ ಪೊಲೀಸರು ಬಂಧಿಸಿದ್ದು, ನಟಿಯರಿಗೆ ಹಣದ ಆಮಿಷ ತೋರಿಸಿ ಅವರನ್ನ ವೇಶ್ಯಾವಾಟಿಕೆಗೆ ಬಳಸಿಕೊಳ್ತಿದ್ದರು ಎನ್ನಲಾಗಿದೆ.
ಬಂಧಿತರ ತಪ್ಪೊಪ್ಪಿಗೆ ಹೇಳಿಕೆಯ ಪ್ರಕಾರ ಐದು ವರ್ಷದಿಂದ ಈ ದಂಧೆಯನ್ನ ನಡೆಸುತ್ತಿದ್ದು, ಬೇಡಿಕೆ ಕಡಿಮೆಯಾದ ನಟಿಯರ ಸಂಪರ್ಕಾಧಿಕಾರಿ ಅಥವಾ ಮ್ಯಾನೇಜರ್ ಮೂಲಕ ನಂಬರ್ ಪಡೆದುಕೊಳ್ತಿದ್ದರಂತೆ. ಆನಂತರದಲ್ಲಿ ಅವರಿಗೆ ಹೆಚ್ಚು ಹಣದ ಆಮಿಷ ಒಡ್ಡಿ ನಟಿಯರನ್ನ ಈ ದಂಧೆಗೆ ಒಪ್ಪಿಸುತ್ತಿದ್ದರಂತೆ. ಹೀಗೆ ಒಪ್ಪಿದ ನಟಿಯರನ್ನ ವಿವಿಐಪಿಗಳು, ರಾಜಕಾರಣಿಗಳು, ಅಧಿಕಾರಶಾಹಿಗೆ ತಲುಪಿಸಿರೋದಾಗಿ ಆರೋಪಿತರು ಒಪ್ಪಿಕೊಂಡಿದ್ದಾರೆ.

ಹತ್ತಿಪ್ಪತ್ತು ಸಾವಿರದಿಂದ ಲಕ್ಷದವರೆಗೂ ನಟಿಯರಿಗೆ ರೇಟ್ ಫಿಕ್ಸ್ ಮಾಡ್ತಿದ್ದಾಗಿ ಬಂಧಿತರು ಹೇಳಿದ್ದಾರೆ. ಬಂಧಿತರ ವಿರುದ್ಧ ದೂರು ಕೊಟ್ಟ ಜಯಲಕ್ಷ್ಮಿ ಅವರನ್ನ ವಾಟ್ಸಾಪ್ ಮೂಲಕ ಇವರು ಸಂಪರ್ಕ ಮಾಡಿದ್ದರು ಅನ್ನೋ ವಿಚಾರ ಈಗ ಬೆಳಕಿಗೆ ಬಂದಿದೆ. ಕೆಲ ನಟಿಯರನ್ನ ಫೇಸ್ಬುಕ್ ಮೂಲಕವೂ ತಮ್ಮ ಜಾಲಕ್ಕೆ ಬಳಸಿಕೊಂಡಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...