alex Certify
ಕನ್ನಡ ದುನಿಯಾ       Mobile App
       

Kannada Duniya

‘ಕುರುಕ್ಷೇತ್ರ’ದಲ್ಲಿ ಹೀಗಿದ್ದಾರೆ ದರ್ಶನ್

kuruk-dar

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಚಿತ್ರ ‘ಕುರುಕ್ಷೇತ್ರ’ ಇದೇ ಆಗಸ್ಟ್ 6 ರಂದು ಅದ್ಧೂರಿಯಾಗಿ ಆರಂಭವಾಗಲಿದೆ. ಕನ್ನಡದ ಹೈ ಬಜೆಟ್ ಚಿತ್ರ ಇದಾಗಿದ್ದು, ಮುನಿರತ್ನ ನಿರ್ಮಾಣದಲ್ಲಿ, ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

ದರ್ಶನ್ ಈ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದರೊಂದಿಗೆ ಕರ್ಣನ ಪಾತ್ರದಲ್ಲಿಯೂ ಮಿಂಚಲಿದ್ದಾರೆ ಎನ್ನಲಾಗಿದೆ.

ದುರ್ಯೋಧನನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿರುವ ಫೋಟೋಗಳು ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ಹೊಸ ಸಂಭ್ರಮ ಮೂಡಿಸಿವೆ.

ದುರ್ಯೋಧನನಾಗಿ ದರ್ಶನ್ ಹೇಗೆ ಕಾಣುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮಾತ್ರವಲ್ಲದೇ, ಸಿನಿರಸಿಕರಲ್ಲಿ ಮೂಡಿತ್ತು.

ಆಗಸ್ಟ್ 6 ರಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗುವುದು ಎನ್ನಲಾಗಿದೆ. ಈಗಾಗಲೇ ‘ತಾರಕ್’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಆಗಸ್ಟ್ 6 ರಿಂದ ದರ್ಶನ್ ‘ಕುರುಕ್ಷೇತ್ರ’ ದಲ್ಲಿರುತ್ತಾರೆ.

ಅದ್ದೂರಿ ತಾರಾಗಣ, ಹೈ ಬಜೆಟ್ ಚಿತ್ರವಾಗಿರುವ ‘ಕುರುಕ್ಷೇತ್ರ’ ಆರಂಭದಿಂದಲೂ ಗಮನ ಸೆಳೆದಿದೆ. ಮುಹೂರ್ತದ ಬಳಿಕ ಚಿತ್ರೀಕರಣ ಆರಂಭಕ್ಕೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...