alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಹೇಳಿ ಶೂಟಿಂಗ್ ತಪ್ಪಿಸಿಕೊಂಡಿದ್ದರಂತೆ ಶಾರುಕ್! ಯಾಕೆ ಗೊತ್ತಾ?

ಶಾರುಕ್ ಖಾನ್ ಹಾಗೂ ಪ್ರೀತಿ ಝಿಂಟಾ ಅಭಿನಯದ ‘ದಿಲ್ ಸೆ’ ಚಿತ್ರ ಆ ಕಾಲದಲ್ಲಿ ಭಾರಿ ಸದ್ದು ಮಾಡಿತ್ತು. ಈ ಚಿತ್ರದ ‘ಜಿಯಾ ಜಲೆ’ ಹಾಡಂತೂ ಸಿನಿ ಪ್ರೇಕ್ಷಕರ ಮನಗೆದ್ದಿತ್ತು. ಎ ಆರ್ ರೆಹಮಾನ್ ಸಂಗೀತದ ಜೊತೆಗೆ ಕೋರಿಯೋಗ್ರಫಿ ಹಾಗೂ ಪ್ರೀತಿ ಹಾಗೂ ಶಾರುಕ್ ಕೆಮೆಸ್ಟ್ರಿ ನೋಡುಗರ ಮನಸೂರೆಗೊಂಡಿತ್ತು.

ಆ ಹಾಡಿನ ಕೋರಿಯೋಗ್ರಾಫರ್ ಫರ್ಹಾ ಖಾನ್ ಇತ್ತೀಚಿಗೆ ಖಾಸಗಿ ವಾಹಿನಿಗೆ ಸಂದರ್ಶನ ನೀಡುತ್ತಾ ಹಾಡಿನ ಬಗೆಗಿನ ಇಂಟರೆಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಈ ಹಾಡಿನಲ್ಲಿ ಜಲಪಾತದ ಅಡಿಯಲ್ಲಿ ನಿಂತು ಪ್ರೀತಿ ಡ್ಯಾನ್ಸ್ ಮಾಡುತ್ತಾಳೆ. ಆದರೆ ಈ ಸೀನ್ ನಲ್ಲಿ ಶಾರುಕ್ ಕಾಣೋದಿಲ್ಲ. ಇದಕ್ಕೆ ಕಾರಣ, ಶಾರುಕ್ ಗೆ ಫರ್ಹಾ ಬಿಳಿ ಬಣ್ಣದ ಧೋತಿ ತೊಟ್ಟು ನೀರಿನಲ್ಲಿ ಡ್ಯಾನ್ಸ್  ಮಾಡಬೇಕು ಎಂದು ಜೋಕ್ ಮಾಡಿದ್ದರಂತೆ. ಆದರೆ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡ ಎಸ್ ಆರ್ ಕೆ ಇಂಥ ಸೀನ್ ಮಾಡೋಕೆ ಇಷ್ಟವಿಲ್ಲದೆಯೇ….ದಾರಿ ತಪ್ಪಿತು ಎಂದೆಲ್ಲಾ ಹೇಳಿ ಆ ದಿನದ ಶೂಟಿಂಗ್ ನಿಂದ ತಪ್ಪಿಸಿಕೊಂಡಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...