alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲೆ ಚಿತ್ರ ಹಾಕಿದ್ದ ನಟಿ ಟೀಕಾಕಾರರಿಗೆ ಹೇಳಿದ್ದೇನು?

esha-gupta-instagram_640ನಟಿ ಇಷಾ ಗುಪ್ತಾ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಬೆತ್ತಲೆ ಚಿತ್ರಗಳನ್ನು ಹಾಕುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದರು. ಇಷಾ ಗುಪ್ತಾರ ಈ ಚಿತ್ರಗಳ ಕುರಿತು ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಕಮೆಂಟ್ ವಿಭಾಗವನ್ನೇ ತೆಗೆದಿದ್ದರು.

ಇದೀಗ ತಮ್ಮ ವಿರುದ್ದ ಕೇಳಿ ಬಂದ ಟೀಕೆಗಳಿಗೆ ಇಷಾ ಗುಪ್ತಾ ಉತ್ತರ ನೀಡಿದ್ದಾರೆ. ತಾವು ಈ ಚಿತ್ರ ಹಾಕುವ ಸಂದರ್ಭದಲ್ಲೇ ಟೀಕೆಗಳು ಕೇಳಿ ಬರುತ್ತದೆಂಬುದರ ಅರಿವಿತ್ತು. ಆದರೆ ಇದ್ಯಾವುದಕ್ಕೂ ತಾವು ಸೊಪ್ಪು ಹಾಕುವುದಿಲ್ಲ. ಇದು ನನ್ನ ದೇಹ ಎಂದಿದ್ದಾರೆ.

ಬಾಲಿವುಡ್ ಚಿತ್ರರಂಗ ಪ್ರವೇಶಿಸುವ ಮುನ್ನ ತಾವು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ಆಗಲೂ ಇಂತಹ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದೆ. ಆಗ ಕೇಳಿ ಬರದ ಟೀಕೆಗಳು ಈಗ ಕೇಳಿ ಬರುತ್ತಿವೆ ಎಂದಿದ್ದಾರೆ.

ಈ ಹಿಂದೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಸೋಹಾ ಆಲಿಖಾನ್, ಸನ್ನಿ ಲಿಯೋನ್, ಫಾತೀಮಾ ಸನಾ ಶೇಕ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ತಮ್ಮ ಕೆಲ ಫೋಟೋಗಳ ಕಾರಣಕ್ಕೆ ಟೀಕೆಗಳಿಗೊಳಗಾಗಿದ್ದು, ಈ ಸಾಲಿಗೆ ಈಗ ಇಷಾ ಗುಪ್ತಾ ಸೇರ್ಪಡೆಯಾಗಿದ್ದಾರೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಅಕ್ಷಯ್ ಕುಮಾರ್ ರವರ ‘ರುಸ್ತುಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇಷಾ ಗುಪ್ತಾ, ಈಗ ಅಜಯ್ ದೇವಗನ್, ಇಲಿಯಾನಾರೊಂದಿಗೆ Baadshaho ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...