alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರ್ದಿಕ್ ಪಾಂಡ್ಯ ಸಂಬಂಧದ ಬಗ್ಗೆ ಈ ನಟಿ ಹೇಳಿದ್ದೇನು?

ಬಾಲಿವುಡ್ ನಿಂದ ದೂರವಿರುವ ಇಶಾ ಗುಪ್ತಾ ಶೀಘ್ರವೇ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಇಶಾ ಗುಪ್ತಾ ಸಿನಿಮಾ ಅಷ್ಟು ಸದ್ದು ಮಾಡಿಲ್ಲ. ಆದ್ರೆ ಆಕೆ ಡೇಟಿಂಗ್ ಚರ್ಚೆಯಾಗ್ತಿದೆ. ಈ ಬಗ್ಗೆ ಮೊದಲ ಬಾರಿ ಇಶಾ ಮಾಧ್ಯಮಗಳ ಮುಂದೆ ಮಾತನಾಡಿದ್ದಾಳೆ.

ಬಾಲಿವುಡ್ ನಟಿ ಇಶಾ ಗುಪ್ತಾ ಹಾಗೂ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅನೇಕ ದಿನಗಳಿಂದ ಚರ್ಚೆಯಲ್ಲಿದ್ದಾರೆ. ಕಳೆದ ಜೂನ್ ನಲ್ಲಿ ಇಶಾ-ಹಾರ್ದಿಕ್ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಕೆಲವೇ ದಿನಗಳಲ್ಲಿ ಇಬ್ಬರೂ ಆಪ್ತರಾದ್ರು. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಇಶಾ ಮೊದಲ ಬಾರಿ ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡಿದ್ದಾಳೆ.

ಜನರು ಮಾತನಾಡ್ತಾರೆ. ಮಾತನಾಡುವುದು ಅವ್ರ ಕೆಲಸ. ಈ ಸುದ್ದಿ ಬಗ್ಗೆ ನಾನು ಯಸ್ ಆಗ್ಲಿ ನೋ ಆಗ್ಲಿ ಹೇಳುವುದಿಲ್ಲವೆಂದು ಇಶಾ ಹೇಳಿದ್ದಾಳೆ. ಇಶಾ ಮಾತು ಕೇಳಿದ್ರೆ ಹಾರ್ದಿಕ್ ಹಾಗೂ ಇಶಾ ಮಧ್ಯೆಯಿರುವ ಪ್ರೀತಿ ನಿಜ ಎನ್ನಿಸುತ್ತದೆ. ಇಶಾ ಇಬ್ಬರ ಮಧ್ಯೆಯಿರುವ ಸಂಬಂಧವನ್ನು ಅಲ್ಲಗಳೆದಿಲ್ಲ. ಹಾಗಂತ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಈಗ ಹಾರ್ದಿಕ್ ಪಾಂಡ್ಯ ಯಾವ ಪ್ರತಿಕ್ರಿಯೆ ನೀಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...