alex Certify
ಕನ್ನಡ ದುನಿಯಾ       Mobile App
       

Kannada Duniya

ಗಗನಕ್ಕೇರಿದೆ ನಟಿ ಕರೀನಾ ಸಂಭಾವನೆ

ಚಿತ್ರರಂಗದಲ್ಲಿ ಮದುವೆಯಾದ ಮೇಲೆ ನಟಿಯರಿಗೆ ಬೇಡಿಕೆಗಳು ಕಡಿಮೆಯಾಗುತ್ತೆ. ಅದರಲ್ಲೂ ಒಂದು ಮಗುವಿನ ತಾಯಿಯಾದ ಮೇಲಂತೂ ಆ ನಟಿಯರಿಗೆ ನೀಡುವ ಸಂಭಾವನೆ ಜತೆಗೆ ಅವಕಾಶಗಳೂ ಕಡಿಮೆಯಾಗುತ್ತೆ. ಇನ್ನು ನೋಡೊ ಜನರು ಮೂಗು ಮುರಿಯಲು ಆರಂಭಿಸುತ್ತಾರೆ. ಆದರೆ ಇದಕ್ಕೆಲ್ಲ ಭಿನ್ನವಾಗಿ ನಿಲ್ಲುತ್ತಾರೆ ಬಾಲಿವುಡ್ ನಟಿ ಕರೀನಾ ಕಪೂರ್.

ಹೌದು, ಕರೀನಾ ಬಾಲಿವುಡ್‍ನಲ್ಲಿ ಹೊಸ ದಾಖಲೆ ಬರೆಯೋಕೆ ಹೊರಟಂತಿದೆ. ಒಂದು ಮಗುವಿನ ತಾಯಿ ಆದ ಮೇಲೂ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ ಎಂಬುದು ವಿಶೇಷ.

ಮಹಿಳಾ ಪ್ರಧಾನ ಚಿತ್ರ ‘ವೀರೇ ದಿ ವೆಡ್ಡಿಂಗ್’ ಬಾಕ್ಸಾಫೀಸ್‍ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಸಿನಿಮಾಗೆ ಕರೀನಾ ಕಪೂರ್ 7 ಕೋಟಿ ಸಂಭಾವನೆ ಪಡೆದಿದ್ದರಂತೆ. ಈ ಚಿತ್ರದ ಯಶಸ್ಸು ಈಗ ಕರೀನಾ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಕರೀನಾ ತಮ್ಮ ಕಾಲ್​ಶೀಟ್​ ಗೆ 10 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

ಸುಮಾರು 18 ವರ್ಷಗಳಿಂದ ಬಾಲಿವುಡ್‍ನಲ್ಲಿರೋ ಕರೀನಾ ಸೋಲು-ಗೆಲುವು, ಪ್ರಶಸ್ತಿ, ಟೀಕೆ ಹೀಗೆ ಎಲ್ಲದಕ್ಕೂ ಒಳಗಾದವರು. ಆದಾಗ್ಯೂ ಕರೀನಾ ಬೇಡಿಕೆ ಮಾತ್ರ ಕುಗ್ಗಿಲ್ಲ. ಇನ್ನೂ ಟಾಪ್ ಹಿರೋಯಿನ್ ಗಳ ಸಾಲಿನಲ್ಲಿಯೇ ಇದ್ದಾರೆ. ಮದುವೆಯಾಗಿ, ಒಂದು ಮಗುವಿನ ತಾಯಿ ಆದ ಮೇಲೂ ಕರೀನಾ ಅತಿ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ ಮತ್ತು ಕಂಗನಾ ರನಾವತ್​ ಅವರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ನಿಜಕ್ಕೂ ಗಮನಾರ್ಹ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...