alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಬರಲೇ ಇಲ್ಲ ಅಂಬರೀಶ್, ಕಾದು ಕಾದು ಪ್ರಚಾರಕ್ಕೆ ತೆರಳಿದ ಸಿ.ಎಂ.

ಮೈಸೂರು: ಮೈಸೂರು ಟಿ.ಕೆ. ಬಡಾವಣೆಯ ನಿವಾಸದಲ್ಲಿ ಮುಖ್ಯಮಂತ್ರಿ ಅರ್ಧ ಗಂಟೆ ಕಾದರೂ ಮಾಜಿ ಸಚಿವ ಅಂಬರೀಶ್ ಬರಲೇ ಇಲ್ಲ.

ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆಯ ವಿಚಾರವಾಗಿ ಅಂಬರೀಶ್ ತಮ್ಮ ನಿಲುವು ಬದಲಿಸಿಲ್ಲ. ಹಲವು ಷರತ್ತುಗಳನ್ನು ಅವರು ಮುಂದಿಟ್ಟಿದ್ದಾರೆ. ಅಂಬರೀಶ್ ಅರ್ಜಿ ಹಾಕದಿದ್ದರೂ ಅವರಿಗೆ ಟಿಕೆಟ್ ಘೋಷಣೆಯಾಗಿ ಬಿ ಫಾರಂ ಕೊಡಲಾಗಿದೆ. ಹೀಗಿದ್ರೂ ಅವರು ಬಿ ಫಾರಂ ಪಡೆದುಕೊಂಡಿಲ್ಲ. ಸಿ.ಎಂ. ಸೇರಿದಂತೆ ಹಲವು ನಾಯಕರು ಅವರೊಂದಿಗೆ ಮಾತನಾಡಿದ್ರೂ ತಲೆಕೆಡಿಸಿಕೊಂಡಿಲ್ಲ.

ಇಂದು ಮೈಸೂರಿನಲ್ಲಿ ಅಂಬರೀಶ್ ಹಾಗೂ ಸಿ.ಎಂ. ಭೇಟಿಗೆ 2 ಸಲ ಸಮಯ ನಿಗದಿಯಾಗಿತ್ತಾದರೂ ಅಂಬರೀಶ್ ಭೇಟಿಗೆ ಆಗಮಿಸಿಲ್ಲ. ಮೈಸೂರಿನ ತಮ್ಮ ನಿವಾಸದಲ್ಲಿ ಅಂಬರೀಶ್ ಅವರಿಗೆ ಅರ್ಧ ಗಂಟೆ ಕಾದ ಸಿ.ಎಂ. ಬಳಿಕ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳಿದ್ದಾರೆ.

ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಅಂಬರೀಶ್ ತಂಗಿದ್ದಾರೆ. ಮೈಸೂರಿನಲ್ಲೇ ಇದ್ದರೂ ಅವರು ಸಿ.ಎಂ. ಅವರನ್ನು ಭೇಟಿ ಮಾಡದಿರುವುದು ತೀವ್ರ ಕುತೂಹಲ ಮೂಡಿಸಿದೆ. ನಾಮಪತ್ರ ಸಲ್ಲಿಸುತ್ತಾರಾ? ಇಲ್ಲವೇ ತಮ್ಮ ಬೆಂಬಲಿಗರಿಗೆ ಬಿ ಫಾರಂ ಕೊಡಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...