alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್-ದೀಪಿಕಾ ಮದುವೆ ಮುಹೂರ್ತ ಫಿಕ್ಸ್

ಬಾಲಿವುಡ್ ಮತ್ತೊಂದು ಅದ್ಧೂರಿ ಮದುವೆಗೆ ಸಿದ್ಧವಾಗ್ತಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫಿಲ್ಮೇಯರ್ ವರದಿ ಪ್ರಕಾರ ನವೆಂಬರ್ 10 ರಂದು ರಣವೀರ್-ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ದೀಪಿಕಾ-ರಣವೀರ್ ಈ ವರ್ಷಾಂತ್ಯದಲ್ಲಿ ಮದುವೆಯಾಗ್ತಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಿದೆ. ಆದ್ರೆ ದಿನಾಂಕದ ಬಗ್ಗೆ ಸ್ಪಷ್ಟನೆಯಿರಲಿಲ್ಲ. ಫಿಲ್ಮೇಯರ್ ವರದಿ ನವೆಂಬರ್ 10 ಎನ್ನುತ್ತಿದೆ. ಈ ಬಗ್ಗೆ ರಣವೀರ್ ಹಾಗೂ ದೀಪಿಕಾ ಅಧಿಕೃತ ಹೇಳಿಕೆ ನೀಡಿಲ್ಲ.

ರಣವೀರ್ ಹಾಗೂ ದೀಪಿಕಾ ಮದುವೆಗೆ ಉತ್ಸುಕರಾಗಿದ್ದಾರಂತೆ. ಎಲ್ಲವೂ ಫರ್ಫೆಕ್ಟ್ ಆಗಿರಬೇಕೆಂದು ಬಯಸಿದ್ದಾರಂತೆ. ಹಾಗಾಗಿಯೇ ಹುಡುಕಿ ಹುಡುಕಿ ಮದುವೆಗೆ ದಿನಾಂಕ ಫಿಕ್ಸ್ ಮಾಡ್ತಿದ್ದಾರೆ. ಮದುವೆ ಬೆಂಗಳೂರು ಅಥವಾ ಇಟಲಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ವಿರುಷ್ಕಾರಂತೆ ಗುಟ್ಟಾಗಿ ಮದುವೆಯಾಗಿ ನಂತ್ರ ಪಾರ್ಟಿ ನೀಡ್ತಾರಾ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಈಗಾಗಲೇ ಇಬ್ಬರ ಕುಟುಂಬ ಮದುವೆ ತಯಾರಿ ಶುರು ಮಾಡಿದೆ. ಶಾಪಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಮದುವೆಗಾಗಿಯೇ ದೀಪಿಕಾ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. ರಣವೀರ್ ಕೈನಲ್ಲಿ ಎರಡು ಚಿತ್ರಗಳಿವೆ. ಶೂಟಿಂಗ್ ಜೊತೆ ಮದುವೆ ತಯಾರಿಯನ್ನೂ ರಣವೀರ್ ಮಾಡ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...