alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್-ಅನುಷ್ಕಾಗೆ ಈ ರೀತಿ ಶುಭ ಕೋರಿದೆ ಕಾಂಡೋಮ್ ಕಂಪನಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮದುವೆ ಸುದ್ದಿ ಈಗ ಹಳೆದಾಯ್ತು. ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅನುಷ್ಕಾ-ಕೊಹ್ಲಿ ರಿಸೆಪ್ಷನ್ ಎಲ್ಲಿ? ಯಾವಾಗ ? ಎಂಬ ಪ್ರಶ್ನೆ ಶುರುವಾಗಿದೆ. ಈ ಮಧ್ಯೆ ಕಾಂಡೋಮ್ ಕಂಪನಿ ಶುಭಾಷಯವೊಂದು ಚರ್ಚೆಗೆ ಕಾರಣವಾಗಿದೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಟ್ವೀಟರ್ ನಲ್ಲಿ ಮದುವೆ ಫೋಟೋ ಹಾಕ್ತಿದ್ದಂತೆ ಶುಭಾಷಯಗಳ ಸುರಿಮಳೆಯೇ ಹರಿದು ಬರ್ತಿದೆ. ಗಣ್ಯಾತಿಗಣ್ಯರಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಶುಭಾಷಯ ಕೋರುತ್ತಿದ್ದಾರೆ. ಈ ಮಧ್ಯೆ ಕಾಂಡೋಮ್ ಕಂಪನಿ ಡ್ಯುರೆಕ್ಸ್ ಕೂಡ ಕೊಹ್ಲಿ-ಅನುಷ್ಕಾರಿಗೆ ಶುಭ ಕೋರಿದೆ. ಡ್ಯುರೆಕ್ಸ್ ಶುಭಾಷಯ ಚರ್ಚೆಗೆ ಕಾರಣವಾಗಿದೆ.

ಶುಭಾಷಯ ಅನುಷ್ಕಾ-ಕೊಹ್ಲಿ. ನಿಮ್ಮಬ್ಬರ ಮಧ್ಯೆ ಡ್ಯುರೆಕ್ಸ್ ಹೊರತುಪಡಿಸಿ ಮತ್ಯಾರೂ ಬರದಿರಲಿ ಎಂದು ಡ್ಯುರೆಕ್ಸ್ ಕಂಪನಿ ಟ್ವಿಟ್ ಮಾಡಿದೆ. ಡ್ಯುರೆಕ್ಸ್ ಸಾಮಾಜಿಕ ಜಾಲತಾಣ ಫೇಸ್ಬುಕ್ ಹಾಗೂ ಟ್ವೀಟರ್ ಅಕೌಂಟ್ ಎರಡರಲ್ಲಿಯೂ ಈ ಪೋಸ್ಟ್ ಹಾಕಿದೆ. ಇದನ್ನು ನೋಡಿದ ಅಭಿಮಾನಿಗಳು ಕಮೆಂಟ್ ಶುರುಮಾಡಿದ್ದಾರೆ.

ಕೆಲವರು ಡ್ಯುರೆಕ್ಸ್ ಆಲೋಚನೆಯನ್ನು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಅನುಷ್ಕಾ-ಕೊಹ್ಲಿ ಮಕ್ಕಳನ್ನು ಪಡೆಯಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಮತ್ತೆ ಕೆಲವರು ಬೆಳಿಗ್ಗೆ ಡ್ಯುರೆಕ್ಸ್ ಈ ರೀತಿ ಕಮೆಂಟ್ ಹಾಕಬಹುದಾ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...