alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬಯಲಾಯ್ತು ‘ದುನಿಯಾ’ ವಿಜಯ್ ಇನ್ನೊಂದು ಮುಖ

vijaya-dunia

ಮೈಸೂರು: ಅಭಿಮಾನಿಗಳ ಬಗ್ಗೆ ಅಪಾರ ಅಭಿಮಾನ ಹೊಂದಿರುವ ‘ದುನಿಯಾ’ ಸಂಕಷ್ಟದಲ್ಲಿರುವ ಅನೇಕರಿಗೆ ನೆರವಾಗಿದ್ದಾರೆ.

ಅಭಿಮಾನಿಗಳ ಪ್ರೀತಿಗೆ ಓಗೊಟ್ಟು ಅವರ ಮನೆ ಬಾಗಿಲಿಗೂ ಹೋಗಿ ಬಂದಿದ್ದಾರೆ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಈಗ ಮತ್ತೊಮ್ಮೆ ಅವರ ಮಾನವೀಯ ಮುಖ ಅನಾವರಣಗೊಂಡಿದೆ. ಶಿಕ್ಷೆಯ ಅವಧಿ ಮುಗಿದರೂ ದಂಡ ಕಟ್ಟಲು ಹಣವಿಲ್ಲದೆ ಜೈಲಿನಲ್ಲೇ ಇದ್ದ ಮಹಿಳೆಯೊಬ್ಬರಿಗೆ ‘ದುನಿಯಾ’ ವಿಜಯ್ ನೆರವಾಗಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಹಿಳೆಯೊಬ್ಬರು 22,000 ರೂ. ದಂಡ ಪಾವತಿಸಲು ಹಣವಿಲ್ಲದೆ ಜೈಲಿನಲ್ಲೇ ಉಳಿದಿದ್ದಾರೆ.

ಈ ವಿಷಯವನ್ನು ಸ್ನೇಹಿತರ ಮೂಲಕ ತಿಳಿದುಕೊಂಡ ದುನಿಯಾ ವಿಜಯ್, ಮೈಸೂರು ಜೈಲಿಗೆ ತೆರಳಿ ದಂಡದ ಹಣವನ್ನು ಪಾವತಿಸಿ ಬಿಡುಗಡೆ ಮಾಡಿಸಿದ್ದಾರೆ. ಹೀಗೆ ಅಭಿಮಾನಿಗಳು, ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...