alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದಲ್ಲಿ ಕಣ್ಣೀರಿಟ್ಟ ‘ದುನಿಯಾ’ ವಿಜಯ್

viji

ಬೆಂಗಳೂರು: ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ‘ದುನಿಯಾ’ ವಿಜಯ್, ಇಂದು ತಮ್ಮ 43 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಜಯ್, ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ‘ಮಾಸ್ತಿಗುಡಿ’ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ನಿಧನರಾದ ಅನಿಲ್ ಮತ್ತು ಉದಯ್ ಅವರನ್ನು ನೆನೆದು ವಿಜಯ್ ಕಣ್ಣೀರಿಟ್ಟಿದ್ದಾರೆ.

ರಾತ್ರಿಯೇ ಬನಶಂಕರಿ ಸ್ಮಶಾನಕ್ಕೆ ತೆರಳಿ ಅಗಲಿದ ಸ್ನೇಹಿತರ ಸಮಾಧಿಗೆ ನಮನ ಸಲ್ಲಿಸಿದ ವಿಜಯ್, ಅವರಿಬ್ಬರ ನೆನಪಿನಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಬಿಕ್ಕಿದ್ದಾರೆ.

ಸ್ನೇಹಿತರಿಬ್ಬರ ಕುಟುಂಬಗಳಿಗೆ ನೆರವಾಗುತ್ತೇನೆ ಎಂದು ಹೇಳುತ್ತಲೇ ಭಾವುಕರಾದ ಅವರು ಅತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು, ಅಪಾರ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...