alex Certify
ಕನ್ನಡ ದುನಿಯಾ       Mobile App
       

Kannada Duniya

ಕಷ್ಟ ಕಾಲದಲ್ಲಿ ತಾಯ್ನಾಡಿನಲ್ಲಿಲ್ಲದ ಬಗ್ಗೆ ಬೇಸರಿಸಿದ ನಟ

ಮಾಲಿವುಡ್ ನ ಯಂಗ್ ಸೂಪರ್ ಸ್ಟಾರ್ ಮತ್ತು ಮುಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ ಕಷ್ಟ ಕಾಲದಲ್ಲಿ ಕೇರಳದಲ್ಲಿ ತನ್ನ ಹಾಜರಿ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿರಾಶ್ರಿತರು ಮತ್ತು ಸಂತ್ರಸ್ಥರ ಕಷ್ಟಕ್ಕೆ ಈ ಸಮಯದಲ್ಲಿ ಕೇರಳದಲ್ಲಿದ್ದು ಸ್ಪಂದಿಸೋಕೆ ಆಗ್ತಿಲ್ಲವಲ್ಲ ಅನ್ನೋ ನೋವು ಅವರನ್ನ ಕಾಡ್ತಿದೆಯಂತೆ. ಈ ಬಗ್ಗೆ ಕೇರಳದ ಅನೇಕ ಟ್ರೋಲ್ ಪೇಜ್ ಗಳು ಕೂಡ ದುಲ್ಕರ್ ಸಲ್ಮಾನ್ ಬಗ್ಗೆ ಟೀಕೆ ಮಾಡ್ತಿವೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶವೊಂದನ್ನು ಬರೆದಿರುವ ದುಲ್ಕರ್ ಸಲ್ಮಾನ್ ಕೇರಳದಲ್ಲಿ ಇಲ್ಲದೆ ಇರೋ ವಿಚಾರ ನನ್ನನ್ನು ಕೊಲ್ಲುತ್ತಿದೆ. ಹಾಗಂತ ತಾನು ಸುಮ್ಮನೆ ಕೂರೋದಕ್ಕೆ ಸಾಧ್ಯವಿಲ್ಲ. ಪ್ರವಾಹ ಮತ್ತು ಸಂತ್ರಸ್ಥರ ಬಗ್ಗೆ ಸಾಧ್ಯವಾದಷ್ಟು ಮಾಹಿತಿಯನ್ನು ಶೇರ್ ಮಾಡೋದಾಗಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಟ್ರೋಲ್ ಪೇಜ್ ಗಳಿಗೂ ಪರೋಕ್ಷವಾಗಿ ಉತ್ತರ ನೀಡಿರುವ ದುಲ್ಕರ್ ನಾವು ಏನು ಅನ್ನೋದನ್ನ ಯಾರಿಗೂ ರುಜುವಾತು ಮಾಡಬೇಕಾದ ಅಗತ್ಯವಿಲ್ಲ. ಈ ಸಮಯದಲ್ಲಿ ಆದಷ್ಟು ಋಣಾತ್ಮಕ ಅಂಶಗಳಿಂದ ದೂರವಿರಿ. ಕಾಮೆಂಟ್ ಮಾಡಿದವರಲ್ಲಿ ಬಹುತೇಕರು ಕೇರಳದ ಕಷ್ಟಕ್ಕೆ ಸ್ಪಂದಿಸಿಲ್ಲ ಅನ್ನೋದು ಅಷ್ಟೇ ಸತ್ಯ ಅಂತ ದುಲ್ಕರ್ ಹೇಳಿದ್ದಾರೆ. ಈಗಾಗ್ಲೇ ಮುಮ್ಮಟ್ಟಿ ಮತ್ತು ದುಲ್ಕರ್ ಸಲ್ಮಾನ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...