alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಕ್ರವರ್ತಿ’ ಯನ್ನು ವೀಕ್ಷಿಸಿದವರೆಷ್ಟು ಮಂದಿ ಗೊತ್ತಾ…?

2017ರಲ್ಲಿ ಕನ್ನಡದಲ್ಲಿ ತೆರೆಗೆ ಬಂದಂತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಚಕ್ರವರ್ತಿ ಸಾಕಷ್ಟು ಸದ್ದು ಮಾಡಿತ್ತು. 1980ರ ದಶಕದಿಂದ ಇಂದಿನವರೆಗಿನ ಡಾನ್ ಪಾತ್ರದಲ್ಲಿ ಡಿ ಬಾಸ್ ಮಿಂಚು ಹರಿಸಿದ್ರು.

ಚಿಂತನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದ ಚಿತ್ರ ಕನ್ನಡದಲ್ಲಿ ಹಿಟ್ ಅನ್ನಿಸಿಕೊಂಡಿತ್ತು. ಆದ್ರೆ ಈಗ ಚಕ್ರವರ್ತಿ ಸಿನಿಮಾದ ಹಿಂದಿ ಡಬ್ ವರ್ಷನ್ ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಅಗ್ತಿದೆ.

ಸೆಪ್ಟೆಂಬರ್ 3ರಂದು ಚಕ್ರವರ್ತಿ ಸಿನಿಮಾದ ಹಿಂದಿ ಡಬ್ಡ್ ವರ್ಷನ್ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ಸಿನಿ ಪ್ರೇಮಿಗಳಿಗೆ ಸಿನಿಮಾ ಸಾಕಷ್ಟು ಇಷ್ಟವಾಗಿಬಿಟ್ಟಿದೆ. ಇಲ್ಲಿಯವರೆಗೂ ಸುಮಾರು 7 ಮಿಲಿಯನ್ ಮಂದಿ ಅಂದ್ರೆ 70 ಲಕ್ಷ ಜನರು ಸಿನಿಮಾವನ್ನು ನೋಡಿದ್ದಾರೆ.

ಇದರಿಂದ ಡಿ ಬಾಸ್ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕನ್ನಡ ಸಿನಿಮಾಗೆ ಯೂಟ್ಯೂಬ್ ನಲ್ಲಿ ಹೀಗೊಂದು ಜನಸ್ಪಂದನೆ ಸಿಕ್ಕಿರೋದು ಕೂಡ ಗಮನಾರ್ಹ ವಿಷಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...