alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಿಂಗ್ ನ್ಯೂಸ್: ಸಲ್ಮಾನ್ ಹತ್ಯೆಗೆ ಸಂಚು ನಡೆಸಿದ್ದ ಆರೋಪಿ ಅರೆಸ್ಟ್

ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಸಹಚರನೊಬ್ಬನನ್ನು ಹರಿಯಾಣ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡ ಬಂಧಿಸಿದ್ದು, ವಿಚಾರಣೆ ವೇಳೆ ಈತ, ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಹತ್ಯೆ ಮಾಡಲು ಸಿದ್ಧತೆ ನಡೆಸಿದ್ದನೆಂಬ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ.

ಹೈದರಾಬಾದ್ ನಲ್ಲಿ ಪಾತಕಿ ಸಂಪತ್ ನೆಹ್ರಾ ಪೊಲೀಸರ ಬಲೆಗೆ ಬಿದ್ದಿದ್ದು, ಆತನನ್ನು ಈಗ ಗುರುಗ್ರಾಮಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಸಂಪತ್ ತಾನು ಲಾರೆನ್ಸ್ ಬಿಷ್ಣೋಯ್ ಸೂಚನೆ ಮೇರೆಗೆ ಮುಂಬೈಗೆ ತೆರಳಿ ಸಲ್ಮಾನ್ ಖಾನ್ ರ ಚಲನವಲನಗಳನ್ನು ಗಮನಿಸಿದ್ದು, ಹತ್ಯೆ ಮಾಡಲು ಸಿದ್ಧತೆ ನಡೆಸಿದ್ದೆ ಎಂದು ತಿಳಿಸಿದ್ದಾನೆ.

ಚಂಡೀಘಡದ ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರ ಪುತ್ರನಾಗಿರುವ 28 ವರ್ಷದ ಸಂಪತ್, ಬಹು ಹಿಂದೆಯೇ ಪಾತಕ ಲೋಕಕ್ಕೆ ಕಾಲಿಟ್ಟಿದ್ದ. 2016ರಲ್ಲಿ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಈತನನ್ನು, ಪಟಿಯಾಲ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿಯೇ ಬಿಷ್ಣೋಯ್ ಸಂಪರ್ಕಕ್ಕೆ ಬಂದಿದ್ದು, ಬಳಿಕ ಆತನ ತಂಡದಲ್ಲಿ ಸಕ್ರಿಯವಾಗಿದ್ದ.

ಪ್ರಸ್ತುತ ರಾಜಸ್ಥಾನದ ಭರತ್ಪುರ್ ಜೈಲಿನಲ್ಲಿರುವ ಬಿಷ್ಣೋಯ್, ಸಲ್ಮಾನ್ ಖಾನ್ ರನ್ನು ಹತ್ಯೆ ಮಾಡುವುದಾಗಿ 2018 ರ ಜನವರಿಯಲ್ಲಿ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದ. ಜೈಲಿನಿಂದಲೇ ಸಂಪತ್ ಗೆ ಸಲ್ಮಾನ್ ಹತ್ಯೆ ಕುರಿತು ಬಿಷ್ಣೋಯ್ ಸೂಚನೆ ನೀಡಿದ್ದು, ಸಂಪತ್ ಇದಕ್ಕೆ ಸಿದ್ಧತೆ ನಡೆಸುತ್ತಿರುವಾಗಲೇ ಹರಿಯಾಣ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿರುವ ಪೊಲೀಸರು, ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...