alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲೇ ಅಭಿಮಾನಿಗೆ ಬೈದಾಡಿದ ದರ್ಶನ್, ಕಾರಣ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ದರ್ಶನ್ ಹೋದಲ್ಲಿ ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ತಾರೆ. ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿರುವ ದರ್ಶನ್ ಅವರು ಹೊರಗೆ ಓಡಾಡುವುದೇ ಒಮ್ಮೊಮ್ಮೆ ಕಷ್ಟವಾಗುತ್ತೆ. ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ನಡೆಸಬೇಕಾಗುತ್ತದೆ.

ಸಮಯ ಸಿಕ್ಕಾಗಲೆಲ್ಲಾ ದರ್ಶನ್ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ. ಆದರೆ, ಕೆಲವು ಸಲ ಅಭಿಮಾನಿಗಳ ಅತಿರೇಕದ ಅಭಿಮಾನದಿಂದ ತೊಂದರೆ ಅನುಭವಿಸಬೇಕಾಗುತ್ತೆ.

ದರ್ಶನ್ ಇತ್ತೀಚೆಗೆ ಖರೀದಿಸಿರುವ ಲ್ಯಾಂಬೊರ್ಗಿನಿ ಕಾರಿನಲ್ಲಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಫಾಲೋ ಮಾಡಿದ್ದಾರೆ. ಸುಮಾರು ದೂರದವರೆಗೂ ದರ್ಶನ್ ಅವರನ್ನು ಫಾಲೋ ಮಾಡಿಕೊಂಡು ಅಭಿಮಾನಿ ಬಂದಿದ್ದು, ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ.

ಇದನ್ನು ಗಮನಿಸಿದ ದರ್ಶನ್ ಕಾರಿನಿಂದ ಇಳಿದು ಫಾಲೋ ಮಾಡಿದ ಅಭಿಮಾನಿಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಇದನ್ನು ಮತ್ತೊಬ್ಬ ಅಭಿಮಾನಿ ಚಿತ್ರೀಕರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

‘ದಯವಿಟ್ಟು ಯಾರೂ ಸಹ ದರ್ಶನ್ ಅವರಿಗೆ ಈ ರೀತಿ ತೊಂದರೆ ಕೊಡಬೇಡಿ, ಅಭಿಮಾನ, ಪ್ರೀತಿ ಇದೆ ಎಂದು ಮೇನ್ ರೋಡ್ ಗಳಲ್ಲಿ ಕಾರು ಫಾಲೋ ಮಾಡ್ಕೊಂಡು ಹೋಗಬೇಡಿ, ನಿಮಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನಮ್ಮ ಬಾಸ್ ಉತ್ತರ ಕೊಡಬೇಕಾಗುತ್ತೆ’ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...