alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ ಹೆಸರು ಹೇಳ್ತಿದ್ದಂತೆ ಹೀಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರ್ತಿರುವ ದಸ್ ಕಾ ಧಮ್ ಕಾರ್ಯಕ್ರಮಕ್ಕೆ ಅನಿಲ್ ಕಪೂರ್ ಬಂದಿದ್ದರು. ಫನ್ನಿ ಖಾನ್ ಚಿತ್ರದ ಪ್ರಚಾರಕ್ಕೆ ಬಂದಿದ್ದ ಅನಿಲ್ ಕಪೂರ್ ಹೇಳಿದ ಒಂದು ಮಾತಿಗೆ ಸಲ್ಮಾನ್ ನೀಡಿದ ಪ್ರತಿಕ್ರಿಯೆ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ವಿಡಿಯೋವನ್ನು ಅಭಿಮಾನಿಗಳು ವೈರಲ್ ಮಾಡಿದ್ದಾರೆ.

ಸಲ್ಮಾನ್ ಪ್ರಶ್ನೆಗೆ ಉತ್ತರಿಸಿದ ಅನಿಲ್ ಕಪೂರ್ ಐಶ್ವರ್ಯ್ ರೈ ಹೆಸರು ಹೇಳ್ತಾರೆ. ಆಗ ಸಲ್ಮಾನ್ ಖಾನ್ ಪ್ರತಿಕ್ರಿಯೆ ಭಿನ್ನವಾಗಿತ್ತು. ಅಭಿಮಾನಿಗಳು ಕೂಡ ಚಪ್ಪಾಳೆ ತಟ್ಟಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ರು. ಆರಂಭದಲ್ಲಿ ಐಶ್ವರ್ಯ ರೈ ಎನ್ನುವ ಅನಿಲ್ ಕಪೂರ್ ನಂತ್ರ ಐಶ್ವರ್ಯ ರೈ ಬಚ್ಚನ್ ಎಂದು ಸಲ್ಮಾನ್ ಕಾಲು ಎಳೆಯುತ್ತಾರೆ. ಇದಕ್ಕೆ ಸಲ್ಮಾನ್ ನಗ್ತಾ ಪ್ರತಿಕ್ರಿಯೆ ನೀಡ್ತಾರೆ.

ಫನ್ನಿ ಖಾನ್ ಚಿತ್ರದಲ್ಲಿ ಅನಿಲ್ ಕಪೂರ್ ಜೊತೆ ಐಶ್ವರ್ಯ ರೈ ಬಚ್ಚನ್ ಹಾಗೂ ರಾಜ್ ಕುಮಾರ್ ರಾವ್ ಕಾಣಿಸಿಕೊಂಡಿದ್ದಾರೆ. ಮಾಜಿ ಲವರ್ ಮುಂದೆ ಬರಲು ಇಷ್ಟವಿರದ ಕಾರಣ ಐಶ್ ಚಿತ್ರದ ಪ್ರಚಾರಕ್ಕಾಗಿ ದಸ್ ಕಾ ಧಮ್ ಕಾರ್ಯಕ್ರಮಕ್ಕೆ ಬರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...