alex Certify
ಕನ್ನಡ ದುನಿಯಾ       Mobile App
       

Kannada Duniya

ನೆರೆ ಸಂತ್ರಸ್ತರಿಗೆ ನೆರವು ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಧನಂಜಯ್….

ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನಟ ಧನಂಜಯ್ ಅವರ ಜನ್ಮದಿನ. ಅಭಿಮಾನಿಗಳ ಸಂಭ್ರಮ, ಮುಗಿಲು ಮುಟ್ಟಿದ ಕರತಾಡನ, ಹರ್ಷೋದ್ಘಾರ, ಅದ್ದೂರಿ ಸಮಾರಂಭ… ಇದಾವ ಆಡಂಬರವನ್ನೂ ಮಾಡದ ಧನಂಜಯ್, ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಜಯನಗರದ ಶಾಲಿನಿ ಮೈದಾನಕ್ಕೆ ಆಗಮಿಸಿದ ಅಭಿಮಾನಿಗಳು, ಧನಂಜಯ್ ಗೆ ಶುಭ ಕೋರಿ, ನೆರೆಪೀಡಿತರಿಗಾಗಿ ಕೈಲಾದಷ್ಟು ದೇಣಿಗೆಗಳನ್ನು ನೀಡಿದರು. ಸೆಲ್ಪಿಗೊಂದು ಕಾಣಿಕೆಯಂತೆ ಧನಂಜಯ್ ಧನ ಸಂಗ್ರಹಣೆ ಮಾಡಿದ್ದಾರೆ.

ತಮ್ಮ ಅಭಿಮಾನಿಗಳು ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಸಜ್ಜಾಗುತ್ತಿರುವುದಕ್ಕೆ ಫೇಸ್‍ಬುಕ್‍ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದ ಧನಂಜಯ್, ಅಭಿಮಾನಿಗಳು 22 ರ ರಾತ್ರಿ ಹಾಗೂ 23 ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನಿಮ್ಮ ಅಭಿಮಾನ ನನಗೆ ದೊಡ್ಡದು, ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವ ನೆರೆ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯದ ಸಮಯ ಎಂದು ಹೇಳಿದ್ದರು.

ಧನಂಜಯ್ ಕರೆಗೆ ಓಗೊಟ್ಟ ಅಭಿಮಾನಿಗಳು ಡಾಲಿ ಡೇ ದಿನಕ್ಕೆ ಧನಂಜಯ್ ರನ್ನು ಭೇಟಿಯಾಗಿ ಶುಭ ಕೋರಿ ಪ್ರವಾಹ ಪೀಡಿತರಿಗೆ ಕೈಲಾದಷ್ಟು ದೇಣಿಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...