alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರುತೆರೆಯಲ್ಲೂ ದಾಖಲೆ ಬರೆದ ‘ದೊಡ್ಮನೆ ಹುಡುಗ’

dodmane

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಯಶಸ್ವಿಯಾಗಿ 75 ದಿನ ಪೂರೈಸಿ 100 ನೇ ದಿನದತ್ತ ಮುನ್ನುಗ್ಗುತ್ತಿದೆ.

ಇದೇ ಸಂದರ್ಭದಲ್ಲಿ ಪುನೀತ್ ಅಭಿನಯದ ಕಳೆದ ವರ್ಷ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿದ್ದ ‘ದೊಡ್ಮನೆ ಹುಡುಗ’ ಕಿರುತೆರೆಯಲ್ಲಿಯೂ ಕಮಾಲ್ ಮಾಡಿದೆ.

ಪುನೀತ್ ಅಭಿನಯದ 25 ನೇ ಚಿತ್ರವಾಗಿರುವ ‘ದೊಡ್ಮನೆ ಹುಡುಗ’ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು. ‘ದುನಿಯಾ’ ಸೂರಿ ನಿರ್ದೇಶನದ ಈ ಚಿತ್ರ ಕಳೆದ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಿತ್ತು.

ಕಿರುತೆರೆಯಲ್ಲಿ ಇದುವರೆಗೆ ಯಾವ ಸಿನಿಮಾಗಳು ಗಳಿಸದಷ್ಟು ವೀಕ್ಷಕರನ್ನು ‘ದೊಡ್ಮನೆ ಹುಡುಗ’ ಗಳಿಸಿದ್ದು, ಟಿ.ಆರ್.ಪಿ.ಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ. ಇದುವರೆಗಿನ ಎಲ್ಲಾ ಸಿನಿಮಾಗಳಿಗಿಂತ ಹೆಚ್ಚು ವೀಕ್ಷಕರನ್ನು ಸೆಳೆದ ‘ದೊಡ್ಮನೆ ಹುಡುಗ’ ಹೊಸ ದಾಖಲೆ ಬರೆದಿದೆ ಎನ್ನಲಾಗಿದೆ.

ಪುನೀತ್ ರಾಜ್ ಕುಮಾರ್, ಅಂಬರೀಶ್, ಸುಮಲತಾ, ರಾಧಿಕಾ ಪಂಡಿತ್, ರವಿಶಂಕರ್, ಚಿಕ್ಕಣ್ಣ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...