alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಯಸ್ ಎಂದ್ರೆ ರಿಲೀಸ್ ಆಗಲಿದೆ ಕೇಜ್ರಿವಾಲ್ ಚಿತ್ರ!

arvind_kejriwal_1495165434_749x421

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡುವೆ ಒಂದು ವಿಚಿತ್ರ ಸಂಬಂಧವಿದೆ. ಯಾವಾಗ್ಲೂ ಮೋದಿ ನನಗೆ ಕೆಲಸ ಮಾಡಲು ಬಿಡಲ್ಲ ಎಂದು ಅರವಿಂದ್ ಕೇಜ್ರಿವಾಲ್ ದೂರುತ್ತಿರುತ್ತಾರೆ. ಈಗ ಇನ್ನೊಂದು ವಿಷ್ಯ ಚರ್ಚೆಗೆ ಬಂದಿದೆ. ಅರವಿಂದ್ ಕೇಜ್ರಿವಾಲ್ ಹೋರಾಟದ ಸಾಕ್ಷ್ಯಚಿತ್ರ ಬಿಡುಗಡೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಪ್ಪಿಗೆಯ ಅವಶ್ಯಕತೆ ಇದೆ.

2011ರಲ್ಲಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟ ಹಾಗೂ ಆಮ್ ಆದ್ಮಿ ಪಕ್ಷ ನಿರ್ಮಾಣದ ಸಂದರ್ಭದ ಘಟನೆಯನ್ನು ಸಾಕ್ಷ್ಯಚಿತ್ರ ಮಾಡಲಾಗಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಆನಂದ್ ಗಾಂಧಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ.

ಇದ್ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಶೀಲಾ ದೀಕ್ಷಿತ್ ವರ್ಜಿನಲ್ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಕೇಜ್ರಿವಾಲ್ ಹೋರಾಟದ ದೃಶ್ಯಗಳೂ ಇದ್ರಲ್ಲಿವೆ. ಮೋದಿ ಸೇರಿದಂತೆ ಕೆಲ ನಾಯಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳಿದ್ದು, ಇದನ್ನು ಸಾಕ್ಷ್ಯಚಿತ್ರದಲ್ಲಿ ಬಳಸಲಾಗಿದೆ. ಹಾಗಾಗಿ ಸೆನ್ಸಾರ್ ಮಂಡಳಿ ಮೋದಿ ಹಾಗೂ ಶೀಲಾ ಒಪ್ಪಿಗೆ ಪತ್ರ ತರುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದೆ. ಕೇಜ್ರಿವಾಲ್ ಸಾಕ್ಷ್ಯಚಿತ್ರ ಬಿಡುಗಡೆಗೆ ಮೋದಿ ಯಸ್ ಎಂದಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...