alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ದಿವಾಕರ್ -ಜಯಶ್ರೀನಿವಾಸನ್ ಹೊರಕ್ಕೆ

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರಿಗೆ ನೀಡಲಾಗಿದ್ದ ‘ಪ್ರಜಾಪ್ರಭುತ್ವ’ ಲಕ್ಸುರಿ ಬಜೆಟ್ ಟಾಸ್ಕ್ ಮುಕ್ತಾಯವಾಗಿದೆ. ಸದಸ್ಯರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ‘ಬಿಗ್ ಬಾಸ್’ 5000 ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ನೀಡಿದ್ದಾರೆ.

ಈ ವಾರ ಕ್ಯಾಪ್ಟನ್ ಆಗಿದ್ದ ರಿಯಾಜ್ ಕಳಪೆ ಪ್ರದರ್ಶನ ನೀಡಿದ್ದ ಸ್ಪರ್ಧಿಯಾಗಿ ನಿವೇದಿತಾ ಅವರನ್ನು, ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಯಾಗಿ ಚಂದನ್ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರದಲ್ಲಿ ದಿವಾಕರ್ ಬಳಿ ಮಾತನಾಡಿದ ಕಾರ್ತಿಕ್, ನಿಮಗೆ ಬೆಸ್ಟ್ ಪರ್ ಫಾರ್ಮರ್ ಕೊಡಬೇಕಿತ್ತು ಎಂದು ಹೇಳಿದ್ದಾರೆ.

ಇನ್ನು ಹೊಸ ವರ್ಷದ ಪ್ರಯುಕ್ತ ಮನೆಯ ಸದಸ್ಯರಿಗೆ ಸಂಗೀತ ಕಾರ್ಯಕ್ರಮ ನಡೆಸಲಾಗಿದೆ. ಸೀಕ್ರೆಟ್ ರೂಂನಲ್ಲಿರುವ ಸಮೀರಾಚಾರ್ಯ ಮತ್ತು ಜಯಶ್ರೀನಿವಾಸನ್ ಅವರು ಮನೆಯೊಳಗಿನ ದೃಶ್ಯಗಳನ್ನು ವೀಕ್ಷಿಸಿದ್ದಾರೆ.

‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಮಾತನಾಡಿದ ಸುದೀಪ್ ಮನೆಯ ಸದಸ್ಯರೊಂದಿಗೆ ಪಂಚಾಯಿತಿ ನಡೆಸಿದ್ದಾರೆ. ಈ ವಾರ ಸದಸ್ಯರು ಮನೆಯಲ್ಲಿ ತೋರಿದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನರಂಜನೆ ಕಾರ್ಯಕ್ರಮ ಟಿ.ವಿ. ಶೋ, ರಾಜಕೀಯ, ಪ್ರಜಾಪ್ರಭುತ್ವ ಟಾಸ್ಕ್ ನಲ್ಲಿ ಸದಸ್ಯರು ಉತ್ತಮ ಪ್ರದರ್ಶನ ನೀಡಿದ್ದಾಗಿ ಹೇಳಿದ್ದಾರೆ.

ಅದೇ ರೀತಿ ಮನೆಯ ಸದಸ್ಯರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಕೆಲವು ಸದಸ್ಯರು ಆಡಿದ ಮಾತುಗಳ ಬಗ್ಗೆ ಆಕ್ಷೇಪಿಸಿ ತಿಳಿ ಹೇಳಿದ್ದಾರೆ. ‘ಕಾಲರ್ ಆಫ್ ದಿ ವೀಕ್’ನಲ್ಲಿ ಮಾತನಾಡಿದ ಕವನಾ ಅವರು, ಮುಖಂಡರನ್ನು ಆಯ್ಕೆ ಮಾಡುವಾಗ ಹೊರಗೆ ನಿವೇದಿತಾರನ್ನು ಬೆಂಬಲಿಸಿ, ಒಳಗೆ ಹೋಗಿ ತಮ್ಮನ್ನು ತಾವೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ದಿವಾಕರ್ ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ದಿವಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರೂ ಕವನ ಕೇಳಿದ ಪ್ರಶ್ನೆಯನ್ನು ಕೇಳಿ, ನಿಮಗೆ ಗೊತ್ತಿದ್ರೂ ನೀವೇ ಆಯ್ಕೆ ಮಾಡಿಕೊಂಡ್ರಿ ಎಂದು ಹೇಳಿದ್ದಾರೆ.

ಇನ್ನು ಸೀಕ್ರೆಟ್ ರೂಂನಲ್ಲಿದ್ದ ಸಮೀರಾಚಾರ್ಯ ಮತ್ತೆ ಮನೆಯೊಳಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸಮೀರ್ ಚಾರ್ಯ ಒಳಗೆ ಬಂದಿದ್ದು, ಸದಸ್ಯರಿಗೆ ಅಚ್ಚರಿಯಾಗಿದೆ. ಸೀಕ್ರೆಟ್ ರೂಂನಲ್ಲಿರುವ ಜಯಶ್ರೀನಿವಾಸನ್ ಅವರು ಅಲ್ಲಿಂದಲೇ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಸುದೀಪ್ ತಿಳಿಸಿದ್ದಾರೆ.

ಮನೆಯಲ್ಲಿ ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಸಮೀರಾಚಾರ್ಯ, ಕೃಷಿ, ನಿವೇದಿತಾ ಅವರು ಉಳಿದುಕೊಂಡಿದ್ದು, ದಿವಾಕರ್ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಿಂದ ಹೊರ ಹೋಗುವ ಮೊದಲು ತಪ್ಪಾಗಿದ್ರೆ ಕ್ಷಮಿಸಿ ಎಂದು ಸದಸ್ಯರಿಗೆ ಹೇಳಿದ್ದಾರೆ. ‘ಬಿಗ್ ಬಾಸ್’ ಸೂಚನೆಯಂತೆ ದಿವಾಕರ್ ಸೂಪರ್ ಅಧಿಕಾರವನ್ನು ರಿಯಾಜ್ ಗೆ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...