alex Certify
ಕನ್ನಡ ದುನಿಯಾ       Mobile App
       

Kannada Duniya

‘ಮ್ಯಾಕ್ಸಿಮ್’ ಗಾಗಿ ಅರೆನಗ್ನಳಾದ್ಲು ಬಾಲಿವುಡ್ ನಟಿ

ಪ್ರಚಾರ ಪಡೆಯಲು ಹಾಗೂ ಆ ಮೂಲಕ ಚಿತ್ರರಂಗದ ಗಮನ ಸೆಳೆಯಲು ಕೆಲ ಬಾಲಿವುಡ್ ನಟಿಯರು ಅರೆಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇಂತಹ ಚಿತ್ರಗಳಿಗೆ ನೆಟ್ಟಿಗರು ಟ್ರೋಲ್ ಮಾಡುವುದು ಸಾಮಾನ್ಯವಾಗಿದ್ದು, ಇದೀಗ ನಟಿ ದಿಷಾ ಪಠಾಣಿ ನೆಟ್ಟಿಗರ ಟ್ರೋಲ್ ಗೆ ತುತ್ತಾಗಿದ್ದಾಳೆ.

‘ಲೋಫರ್’ ಚಿತ್ರದ ಮೂಲಕ 2016 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಷಾ, ಮ್ಯೂಸಿಕ್ ವಿಡಿಯೋ ಒಂದರಲ್ಲೂ ಕಾಣಿಸಿಕೊಂಡಿದ್ದಾಳೆ. ಟೈಗರ್ ಶ್ರಾಫ್ ಜೊತೆಗಿನ ಅತ್ಮೀಯತೆಯಿಂದಾಗಿ ಇವರಿಬ್ಬರ ನಡುವೆ ಕುಚ್ ಕುಚ್ ನಡೀತಿದೆ ಎಂಬ ಮಾತುಗಳು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

‘ಭಾಗೀ 2’ ಚಿತ್ರದಲ್ಲಿ ನಟಿಸುತ್ತಿರುವ ದಿಷಾ, ‘ಸಂಘಮಿತ್ರಾ’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಇತ್ತೀಚೆಗೆ ದಿಷಾ ‘ಮ್ಯಾಕ್ಸಿಮ್’ ಮ್ಯಾಗಜೀನ್ ಗಾಗಿ ಅರೆಬೆತ್ತಲೆ ಪೋಸ್ ಕೊಟ್ಟಿದ್ದು, ಈ ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ನಲ್ಲಿ ಪೋಸ್ಟ್ ಮಾಡಿದ್ದಳು. ಈ ಪೋಟೋಗಳ ಕುರಿತು ತರಹೇವಾರಿ ಕಮೆಂಟ್ ಗಳು ಹರಿದು ಬರುತ್ತಿದ್ದು, ಕೆಲವರು ಎಕ್ಸ್ ಪೋಸ್ ಕಡಿಮೆ ಮಾಡುವಂತೆ ಹೇಳಿದ್ದರೆ ಮತ್ತೆ ಕೆಲವರು ಇಂತಹ ಗಿಮಿಕ್ ಬಿಟ್ಟು ಕೆರಿಯರ್ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...