
ನಟಿ ದಿಶಾ ಪಠಾಣಿ ಅಭಿನಯದ ಬಾಗಿ-2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. 65 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಈ ಚಿತ್ರ ಈಗಾಗಲೇ 130 ಕೋಟಿ ಗಳಿಕೆ ಕಂಡಿದೆ. ವಿಶ್ವದಾದ್ಯಂತ ಉತ್ತಮ ಗಳಿಕೆ ಕಾಣ್ತಿರುವ ಚಿತ್ರ 200 ಕೋಟಿ ಕ್ಲಬ್ ನಲ್ಲಿ ಸ್ಥಾನ ಪಡೆದಿದೆ. ಚಿತ್ರದ ಯಶಸ್ಸನ್ನು ದಿಶಾ, ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಜೊತೆ ಎಂಜಾಯ್ ಮಾಡ್ತಿದ್ದಾಳೆ.
ದಿಶಾ ಇತ್ತೀಚೆಗಷ್ಟೇ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಳು. ನೀಲಿ ಬಣ್ಣದ ಡ್ರೆಸ್ ತೊಟ್ಟಿದ್ದ ದಿಶಾ ಸೌಂದರ್ಯವನ್ನು ಬಿಳಿ ಬಣ್ಣದ ಸಣ್ಣ ಬ್ಯಾಗ್ ಒಂದು ಹೆಚ್ಚಿಸಿತ್ತು. Chanel ಬ್ರ್ಯಾಂಡ್ ನ ಈ ಸಣ್ಣ ಬ್ಯಾಗ್ ಬೆಲೆ ಮಾತ್ರ ತಲೆ ಸುತ್ತಿಸುವಷ್ಟಿದೆ. ಯಸ್, ದಿಶಾ ಹಾಕಿದ್ದ ಬ್ಯಾಗ್ ಬೆಲೆ ಬರೋಬ್ಬರಿ 5,54,500 ರೂಪಾಯಿ.
ಇದೇ ಕಾರಣಕ್ಕೆ ದಿಶಾ ರೆಸ್ಟೋರೆಂಟ್ ನ ಜನರ ಗಮನ ಸೆಳೆದಳು. ವಿಜ್ಞಾನಿಯಾಗುವ ಕನಸು ಕಂಡಿದ್ದ ದಿಶಾ 2011ರಲ್ಲಿ ಮಾಡಲಿಂಗ್ ಶುರು ಮಾಡಿದ್ದಳು. 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಇಂಧೋರ್ ಕಿರೀಟ ದಿಶಾ ಮುಡಿಗೇರಿತ್ತು. 2015ರಲ್ಲಿ ಕ್ಯಾಡ್ಬರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಳು. ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದಿಶಾ 2016ರಲ್ಲಿ ಬಾಲಿವುಡ್ ಗೆ ಪ್ರವೇಶ ಪಡೆದಿದ್ದಳು.