alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ಮಧ್ಯೆ ಸಿಕ್ಕಿ ಬಿದ್ಲು ಬಾಲಿವುಡ್ ನಟಿ

ಬಾಲಿವುಡ್ ನ ಕೆಲ ಸ್ಟಾರ್ಸ್ ಸಾರ್ವಜನಿಕರಿಂದ ದೂರವಿರ್ತಾರೆ. ಮತ್ತೆ ಕೆಲವರು ಚಿತ್ರ ಜಗತ್ತಿನಲ್ಲಿ ಹೆಸ್ರು ಮಾಡಿದ್ರೂ ಸಾರ್ವಜನಿಕರ ಮುಂದೆ ಓಡಾಡ್ತಾರೆ. ಕೆಲವೊಮ್ಮೆ ಇದೇ ಕಷ್ಟಕ್ಕೆ ನೂಕುತ್ತದೆ. ಅಭಿಮಾನಿಗಳು ನೆಚ್ಚಿನ ಕಲಾವಿದರನ್ನು ಮುತ್ತಿಕೊಂಡು ಸಮಸ್ಯೆಗೆ ಕಾರಣವಾಗ್ತಾರೆ. ಕೆಲ ದಿನಗಳ ಹಿಂದಷ್ಟೇ ಮೌನಿ ರಾಯ್ ಅಭಿಮಾನಿಗಳ ಮಧ್ಯೆ ಸಿಲುಕಿಕೊಂಡಿದ್ದಳು. ಈಗ ದಿಶಾ ಪಟಾನಿ ಕೂಡ ಅಭಿಮಾನಿಗಳ ಜೊತೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಇತ್ತೀಚಿಗಷ್ಟೇ ದಿಶಾ ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ಲು. ದಿಶಾ ರೆಸ್ಟೋರೆಂಟ್ ಒಳಗಿರುವ ಸಂಗತಿ ಅಭಿಮಾನಿಗಳಿಗೆ ಗೊತ್ತಾಗಿದೆ. ರೆಸ್ಟೋರೆಂಟ್ ಮುಂದೆ ಅಭಿಮಾನಿಗಳು ನೆರೆದಿದ್ದಾರೆ. ದಿಶಾ ಹೊರಗೆ ಬರ್ತಿದ್ದಂತೆ ಆಕೆಯನ್ನು ಮುತ್ತಿಕೊಂಡಿದ್ದಾರೆ.

ದಿಶಾ ಜೊತೆ ಸೆಲ್ಫಿ ತೆಗೆಯಲು ಕೆಲವರು ಮುಂದಾದ್ರೆ ಮತ್ತೆ ಕೆಲವರು ಫೋಟೋ ಕ್ಲಿಕ್ಕಿಸಿದ್ದಾರೆ. ಇನ್ನೂ ಕೆಲವರು ಆಕೆ ಮುಟ್ಟಲು ಮುಂದಾಗಿದ್ದಾರೆ. ಅಭಿಮಾನಿಗಳ ಮಧ್ಯೆದಿಂದ ಕಷ್ಟಪಟ್ಟು ಹೊರಗೆ ಬಂದ ದಿಶಾ ಕಾರ್ ಏರಿದ್ದಾಳೆ. ಅಭಿಮಾನಿಗಳ ವರ್ತನೆಗೆ ದಿಶಾ ತುಂಬಾ ಹೆದರಿದ್ದಳು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...