alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾ ಬಂಧನ ಜಾಹೀರಾತು ವಿಡಿಯೋ ಫುಲ್ ವೈರಲ್

ಇನ್ನೇನು ರಕ್ಷಾ ಬಂಧನಕ್ಕೆ ಒಂದು ದಿನವಷ್ಟೇ ಬಾಕಿ ಇದೆ. ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಸಂಬಂಧಗಳನ್ನು ಬೆಸೆಯುವ ಹಬ್ಬವನ್ನು ನಟಿ ದಿಶಾ ಪಟಾಣಿ ಕೊಂಚ ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ.

ರಕ್ಷಾ ಬಂಧನಕ್ಕೆ ಅಚ್ಚರಿಯ ಉಡುಗೊರೆಯ ಬಗ್ಗೆ ಭಾವನಾತ್ಮಕ ಜಾಹೀರಾತು, ಇದೀಗ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದೆ. ದಿಶಾಳಿಗಿಂತ 10 ವರ್ಷ ಚಿಕ್ಕವನಾದ ಸೂರ್ಯಂಶ ಪಟಾಣಿ ಜತೆ ಹೆಚ್ಚು ಕಾಲ ಕಳೆಯಲು ನಿರ್ಧರಿಸುವ ಅವರು, ಸಹೋದರನ ಚಿಕ್ಕ ವಯಸ್ಸಿನ ಫೋಟೋವನ್ನು, ಆ ಸಂದರ್ಭವನ್ನು ಪುನರ್‌ ಸೃಷ್ಟಿಸುವ ಮೂಲಕ ಸರ್ಪ್ರೈಸ್‌ ನೀಡಿದ್ದಾರೆ.

ಐದಾರು ವರ್ಷ ಚಿಕ್ಕವನಿದ್ದಾಗ ತೆಗೆದ ಫೋಟೋವನ್ನು ಮರುಸೃಷ್ಟಿ ಮಾಡಲಾಗಿದೆ. ಸಣ್ಣವನಿದ್ದ ಸಹೋದರನ ಉಡುಗೆ, ತೊಡುಗೆ ಇತ್ಯಾದಿಗಳನ್ನು ಮತ್ತೆ ಉಡುಗೊರೆ ನೀಡುವ ಮೂಲಕ ಹಳೆ ನೆನಪುಗಳನ್ನು ಮರು ಸೃಷ್ಟಿ ಮಾಡಲಾಗಿದೆ. ಈ ಜಾಹೀರಾತಿನ ವಿಡಿಯೋ ಅಪ್‌ಲೋಡ್‌ ಮಾಡಿರುವ 6 ಗಂಟೆಗಳಲ್ಲಿ 9 ಲಕ್ಷ ಜನ ವೀಕ್ಷಿಸಿದ್ದರೆ, 9.6 ಲಕ್ಷ ಮಂದಿ ಇನ್‌ಸ್ಟಾಗ್ರಾಂನಲ್ಲಿ ಲೈಕ್‌ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...