alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನ ಖ್ಯಾತ ನಿರ್ದೇಶಕ ನೀರಜ್ ಇನ್ನಿಲ್ಲ

ಬಾಲಿವುಡ್ ನ ಖ್ಯಾತ ನಿರ್ದೇಶಕ ನೀರಜ್ ವೋರಾ ನಿಧನ ಹೊಂದಿದ್ದಾರೆ. ಕಂಪನಿ, ಪುಕಾರ್, ರಂಗೀಲಾ, ಸತ್ಯ, ಬಾದ್ ಶಾ, ಮನ್, ಫಿರ್ ಹೇರಾ ಫೇರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಕಾಮಿಡಿ ಸಿನೆಮಾ ಚಾಚಿ 420ಗೂ ಆ್ಯಕ್ಷನ್ ಕಟ್ ಹೇಳಿದ್ದರು.

ಕಳೆದ ವರ್ಷ ಅಕ್ಟೋಬರ್ 19ರಂದು ನೀರಜ್ ವೋರಾಗೆ ಹೃದಯಾಘಾತವಾಗಿತ್ತು. ಅದರ ಬೆನ್ನಲ್ಲೇ ಬ್ರೈನ್ ಸ್ಟ್ರೋಕ್ ಕೂಡ ಸಂಭವಿಸಿದ್ದರಿಂದ ಅವರು ಕಳೆದ 10 ತಿಂಗಳುಗಳಿಂದ ಕೋಮಾದಲ್ಲಿದ್ರು. ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ದೇಶಕರನ್ನು ನಂತರ ಸ್ನೇಹಿತ ಫಿರೋಜ್ ನಾಡಿಯಾಡ್ವಾಲಾರ ಮನೆಗೆ ಶಿಫ್ಟ್ ಮಾಡಲಾಯ್ತು.

ಅಲ್ಲೇ ಒಂದು ಕೋಣೆಯನ್ನು ಐಸಿಯು ಆಗಿ ಪರಿವರ್ತಿಸಲಾಗಿತ್ತು. ಕೋಣೆಯ ತುಂಬಾ ನೀರಜ್ ನಿರ್ದೇಶನದ ಸಿನೆಮಾ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. 24 ಗಂಟೆಯೂ ಆ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ನೀರಜ್ ಕೋಮಾದಿಂದ ಹೊರಬರಲಿ ಅನ್ನೋ ಕಾರಣಕ್ಕೆ ಈ ವ್ಯವಸ್ಥೆಗಳನ್ನೆಲ್ಲ ಕಲ್ಪಿಸಲಾಗಿತ್ತು.

ಆದ್ರೆ ನೀರಜ್ ಚೇತರಿಸಿಕೊಳ್ಳಲೇ ಇಲ್ಲ. ಕೆಲ ವರ್ಷಗಳ ಹಿಂದೆಯೇ ಅವರ ಪತ್ನಿ ಸಹ ಇಹಲೋಕ ತ್ಯಜಿಸಿದ್ದಾರೆ, ದಂಪತಿಗೆ ಮಕ್ಕಳಿರಲಿಲ್ಲ. ಹೇರಾ ಫೇರಿ 3 ಚಿತ್ರಕ್ಕೂ ನೀರಜ್ ತಯಾರಿ ನಡೆಸಿದ್ದರು. ಆದ್ರೆ ಅವರ ನಿಧನದಿಂದಾಗಿ ಚಿತ್ರಕ್ಕೆ ಬ್ರೇಕ್ ಬಿದ್ದಂತಾಗಿದೆ. ನಟನೆ, ನಿರ್ದೇಶನದಲ್ಲಿ ಸೈ ಎನಿಸಿಕೊಂಡಿದ್ದ ನೀರಜ್, ಹಲವು ಚಿತ್ರಗಳಿಗೆ ಸ್ಕ್ರೀನ್ ಪ್ಲೇ ಕೂಡ ಬರೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...