alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಮಗನ ಜೊತೆ ತೆರೆ ಮೇಲೆ ಮಿಂಚಲಿದ್ದಾಳೆ ಈ ನಟಿಯ ಪುತ್ರಿ

ಬಾಲಿವುಡ್ ನ ಪ್ರಸಿದ್ಧ ಕಲಾವಿದರ ಮಕ್ಕಳು ಬಣ್ಣದ ಲೋಕಕ್ಕೆ ಬರ್ತಿದ್ದಾರೆ. ಹಿರಿಯ ನಟಿ ದಿವಂಗತ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಈಗಾಗಲೇ ಬಾಲಿವುಡ್ ಗೆ ಎಂಟ್ರಿಯಾಗಿದ್ದಾಳೆ. ಸೈಫ್ ಅಲಿ ಖಾನ್ ಮಗಳು ಸಾರಾ ಶೀಘ್ರವೇ ಬಾಲಿವುಡ್ ಪ್ರವೇಶ ಮಾಡಲಿದ್ದಾಳೆ. ಇನ್ನು ಕಿಂಗ್ ಖಾನ್ ಶಾರುಕ್ ಖಾನ್ ಮಗ ಆರ್ಯನ್ ಸರದಿ.

ಶಾರುಕ್ ಮಗ ಆರ್ಯನ್ ಖಾನ್ ಬಾಲಿವುಡ್ ಗೆ ಬರಲು ತಯಾರಿ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ ಆರ್ಯನ್ ಖಾನ್ ಮೊದಲ ಚಿತ್ರದಲ್ಲಿ ಶ್ರೀದೇವಿ ಕಿರಿ ಮಗಳು ಖುಷಿ ಕಪೂರ್ ಕಾಣಿಸಿಕೊಳ್ಳಲಿದ್ದಾಳಂತೆ. ಇಬ್ಬರು ಕಲಾವಿದರ ಮಕ್ಕಳನ್ನು ಒಂದೇ ಬಾರಿ ಬಾಲಿವುಡ್ ಗೆ ಪರಿಚಯಿಸುವ ಹೊಣೆಯನ್ನು ಎಂದಿನಂತೆ ನಿರ್ದೇಶಕ ಕರಣ್ ಜೋಹರ್ ಹೊತ್ತಿದ್ದಾರೆ.

ಬೋನಿ ಕಪೂರ್, ಮಗಳ ಜವಾಬ್ದಾರಿಯನ್ನು ಕರಣ್ ಗೆ ನೀಡಿದ್ದಾರಂತೆ. ಶಾರುಕ್ ಮಗನ ಜೊತೆ ತೆರೆ ಹಂಚಿಕೊಳ್ಳೋದು ಖುಷಿಗೆ ಖುಷಿ ವಿಷ್ಯ. ಒಳ್ಳೆ ಸ್ಕ್ರಿಪ್ಟ್ ಹುಡುಕಾಟದಲ್ಲಿದ್ದು, ಸ್ಕ್ರಿಪ್ಟ್ ಸಿಕ್ಕತಕ್ಷಣ ಕರಣ್ ಕಾರ್ಯ ಪ್ರವೃತ್ತರಾಗಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...