alex Certify
ಕನ್ನಡ ದುನಿಯಾ       Mobile App
       

Kannada Duniya

ಯಡವಟ್ಟಾಯ್ತು ಅಂತಿದ್ದಾಳೆ ಈ ಬಾಲಿವುಡ್ ನಟಿ

Kajol-Devgan-Free-Wallpaper

ಬಾಲಿವುಡ್ ಚಿತ್ರರಂಗದ ಯಶಸ್ವಿ, ಜನಪ್ರಿಯ ಜೋಡಿಯಾಗಿರುವ ಶಾರುಖ್ ಖಾನ್ ಹಾಗೂ ಕಾಜೋಲ್ ಬಹು ವರ್ಷಗಳ ನಂತರ ನಟಿಸಿದ ‘ದಿಲ್ ವಾಲೆ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಹಾಗೂ ಚಿತ್ರತಂಡದವರು ಬೇಸರದಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ ಈ ಚಿತ್ರದಲ್ಲಿ ನಾಯಕಿಯಾಗಿದ್ದ ಕಾಜೊಲ್ ತಾವು ‘ದಿಲ್ ವಾಲೆ’ ಸಿನಿಮಾದಲ್ಲಿ ನಟಿಸಿದ್ದು, ತಪ್ಪು ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ನಾನು ಪಾತ್ರಗಳ ಆಯ್ಕೆಯಲ್ಲಿ ಸಾಮಾನ್ಯವಾಗಿ ಯೋಚಿಸಿಯೇ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ, ಬಹಳ ದಿನಗಳ ನಂತರ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆತುರದಲ್ಲಿ ಎಡವಿದ್ದೇನೆ. ನಾನು ‘ದುರ್ಗಾರಾಣಿ ಸಿಂಗ್’ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ‘ದಿಲ್ ವಾಲೆ’ ಗಿಂತ ಸವಾಲಿನ ಪಾತ್ರ ದುರ್ಗಾ ಚಿತ್ರದಲ್ಲಿತ್ತು ಎಂದು ಹೇಳಿದ್ದಾರೆ.

‘ದಿಲ್ ವಾಲೆ’ ಕಾರಣಕ್ಕೆ ಕಾಜೋಲ್ ಬಿಟ್ಟಿದ್ದ ಪಾತ್ರವೀಗ ವಿದ್ಯಾಬಾಲನ್ ಪಾಲಾಗಿದೆ. ‘ದುರ್ಗಾರಾಣಿ ಸಿಂಗ್’ ಪಾತ್ರದಲ್ಲಿ ಕಾಜೋಲ್ ಬದಲಿಗೆ ವಿದ್ಯಾಬಾಲನ್ ಕಾಣಿಸಿಕೊಳ್ಳಲಿದ್ದು, ತಾವು ‘ದಿಲ್ ವಾಲೆ’ ಯಲ್ಲಿ ನಟಿಸಲು ಒಪ್ಪಿಕೊಂಡಿದ್ದು ತಪ್ಪು ನಿರ್ಧಾರವಾಗಿದೆ ಎಂದು ಕಾಜೋಲ್ ಹೇಳಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...