alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಯಾಳಂ ನಟನಿಗೆ ಜೈಲಿನಲ್ಲೇ ಓಣಂ

ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್ ಕಳೆದೆರಡು ತಿಂಗಳುಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಅಳುವಾ ಸಬ್ ಜೈಲಿನಲ್ಲಿರೋ ನಟನಿಗೆ ಈ ಬಾರಿ ಓಣಂ ಹಬ್ಬ ಮಿಸ್ಸಾಗಿದೆ. ಆದ್ರೂ ಹಬ್ಬದ ದಿನ ಸೆಲೆಬ್ರಿಟಿ ಸ್ನೇಹಿತರು ಹಾಗೂ ಕುಟುಂಬಸ್ಥರು ಜೈಲಿನಲ್ಲೇ ದಿಲೀಪ್ ರನ್ನು ಭೇಟಿ ಮಾಡಿದ್ದಾರೆ.

ಅಷ್ಟೇ ಅಲ್ಲ ದಿಲೀಪ್ ಗಾಗಿ ಉಡುಗೊರೆಗಳನ್ನು ಕೂಡ ಹೊತ್ತು ತಂದಿದ್ದರು. ಜಯರಾಮ್ ಅಂತೂ ದಿಲೀಪ್ ಗೆ ಪ್ರತಿವರ್ಷದಂತೆ ಹೊಸ ಬಟ್ಟೆಗಳನ್ನು ನೀಡಿದ್ದಾರೆ. ಫೆಬ್ರವರಿ 17ರಂದು ನಟಿಯನ್ನು ಅಪಹರಿಸಲಾಗಿತ್ತು. ಆಕೆ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ದಿಲೀಪ್ ಕೈವಾಡವಿರುವ ಬಗ್ಗೆ ಸಾಕ್ಷ್ಯ ಕೂಡ ದೊರೆತಿದೆ.

ಹಾಗಾಗಿ ನಟನಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದ್ದು, ಜುಲೈ 10ರಿಂದ್ಲು ದಿಲೀಪ್ ಜೈಲಿನಲ್ಲೇ ಇದ್ದಾರೆ. ರೌಡಿಶೀಟರ್ ಪಲ್ಸರ್ ಸುನಿ ಎಂಬಾತನಿಗೆ ಸುಪಾರಿ ಕೊಟ್ಟು ದಿಲೀಪ್ ಈ ಕೃತ್ಯ ಮಾಡಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಪಲ್ಸರ್ ಸುನಿಯನ್ನು ಕೂಡ ಪೊಲೀಸರು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...