alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್‌ ಗಾಗಿ ಲಕ್ಸುರಿ ರೂಂ ಬಿಟ್ಟುಕೊಟ್ಟ ಅಜಿತ್…! ಕಾರಣವೇನು ಗೊತ್ತಾ…?

ಬಾಲಿವುಡ್ ಸೂಪರ್‌ ಸ್ಟಾರ್‌ಗಳು ಹಾಗೂ ದಕ್ಷಿಣದ ತಾರಾ ದಿಗ್ಗಜರನೇಕರು ಉತ್ತಮ ಸಂಬಂಧ ಹೊಂದಿದ್ದಾರೆ. ಈ ಸಂಬಂಧ ಪರಸ್ಪರ ಹೊಗಳುವಿಕೆಗಷ್ಟೇ ಸೀಮಿತವಾಗಿಲ್ಲ, ತ್ಯಾಗದ ಕಥೆಯೂ ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ?

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ತಮ್ಮ ಚಿತ್ರ ‘ವಿಶ್ವಾಸಂ’ ನ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿದ್ದರು. ಅವರ ಶೆಡ್ಯೂಲ್ ಮುಗಿದಿತ್ತು. ಆದರೆ ಚಿತ್ರದ ನಿರ್ದೇಶಕರು ಕೆಲವು ದೃಶ್ಯಗಳ ರೀ ಶೂಟ್ ಬಯಸಿದ್ದರು. ಹಾಗಾಗಿ ನಟ ಅಜಿತ್ ಸಹಿತ ತಮ್ಮ ಯುನಿಟ್‌ಗೆ ಹೆಚ್ಚುವರಿಯಾಗಿ ಒಂದು ದಿನ ಉಳಿದುಕೊಳ್ಳುವಂತೆ ಹೇಳಿದರು.

ಹೊಟೇಲ್‌ ಗೆ ಹೋಗಿ ಚಿತ್ರತಂಡ ಈ ವಿಷಯ ತಿಳಿಸಿದಾಗ, ನೀವು ರೂಂ ಚೆಕ್‌ಔಟ್ ಮಾಡಬೇಕು, ಚಿತ್ರವೊಂದರ ಶೂಟಿಂಗ್‌ಗಾಗಿ ಬಂದಿರುವ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್, ಅಜಿತ್‌ ತಂಗಿದ್ದ ರೂಂ ಬುಕ್ ಮಾಡಿದ್ದಾರೆ ಎಂಬ ಉತ್ತರ ಬಂದಿದೆ.

ಆದಾಗ್ಯೂ ಒಂದು ದಿನ ನಿಂತು ಶೂಟಿಂಗ್ ಮುಂದುವರಿಸಲು ಅಜಿತ್ ಮತ್ತವರ ತಂಡ ನಿರ್ಧರಿಸಿತು. ಟಾಪ್ ಸ್ಟಾರ್‌ಗಳಿಬ್ಬರು ಒಂದೇ ರೂಂ ಬುಕ್ ಮಾಡಿರುವುದರಿಂದ ಹೊಟೇಲ್ ಸಿಬ್ಬಂದಿ ಇಕ್ಕಟ್ಟಿನಲ್ಲಿ ಸಿಲುಕಿದರು. ಈ ಸಂಗತಿ ಅಜಿತ್ ಅವರಿಗೆ ತಿಳಿದಾಗ ಅವರು, ಲಕ್ಸುರಿಯಸ್ ರೂಂ ಅನ್ನು ಖುಷಿಯಿಂದಲೇ ರಣವೀರ್‌ಗೆ ಬಿಟ್ಟುಕೊಟ್ಟು ಅದೇ ಹೊಟೇಲ್‌ನ ಎಕ್ಸ್ ಕ್ಯೂಟಿವ್ ಕ್ಲಾಸ್ ರೂಂನಲ್ಲಿ ಉಳಿದುಕೊಂಡಿದ್ದಾರೆ.

ರಣವೀರ್‌ಗೆ ಈ ಸಂಗತಿ ಗೊತ್ತಾಗಿದೆಯೋ, ಅವರು ಅಜಿತ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೋ ಎಂಬುದು ತಿಳಿದುಬಂದಿಲ್ಲ. ಆದರೆ ಅಜಿತ್ ಅವರ ಹೃದಯ ವೈಶಾಲ್ಯದ ಸುದ್ದಿ ತಿಳಿದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...