alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷಗಳ ಬಳಿಕ ಬಹಿರಂಗವಾಯ್ತು ‘ಬಾಜಿಗರ್’ ಚಿತ್ರದ ಅಸಲಿ ರಹಸ್ಯ

ತೊಂಬತ್ತರ ದಶಕದ ಹಿಟ್ ಚಿತ್ರ, ಈಗಲೂ ತನ್ನ ಸಂಗೀತ, ವಿಭಿನ್ನ ಕಥೆಗಾಗಿ ಪ್ರೇಕ್ಷಕರನ್ನು ಕಾಡುವ ‘ಬಾಜಿಗರ್’ಗೆ ಇದೇ ತಿಂಗಳು 12ನೇ ತಾರೀಖು ಬೆಳ್ಳಿಹಬ್ಬದ ಸಂಭ್ರಮ.

1993ರಲ್ಲಿ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದ ಶಾರುಖ್ ಖಾನ್, ಕಾಜೋಲ್, ಶಿಲ್ಪಾ ಶೆಟ್ಟಿ ಅಭಿನಯದ ಈ ಚಿತ್ರದ ಕುರಿತ ಬಹುತೇಕರಿಗೆ ಗೊತ್ತಿಲ್ಲದ ಸತ್ಯವೊಂದು ಈಗ ಬೆಳಕಿಗೆ ಬಂದಿದೆ. ಅದೇನು ಗೊತ್ತಾ? ಈ ಚಿತ್ರದ ಕ್ಲೈಮ್ಯಾಕ್ಸ್ ನ  ಅಂತ್ಯವನ್ನು ಎರಡು ರೀತಿಯಲ್ಲಿ ಚಿತ್ರೀಕರಿಸಲಾಗಿತ್ತಂತೆ!
ಹೌದು, ಈ ವಿಚಾರ ಹೇಳಿದ್ದು ಬೇರಾರೂ ಅಲ್ಲ, ಸ್ವತಃ ಚಿತ್ರದ ನಿರ್ದೇಶಕರಾದ ಅಬ್ಬಾಸ್, ಮಸ್ತಾನ್ ಜೋಡಿ.

ಬಾಜಿಗರ್ ಚಿತ್ರದ ಕೊನೆಯಲ್ಲಿ ಶಾರುಖ್ ಖಾನ್, ತಾಯಿ ತೋಳಿನಲ್ಲಿ ಸಾಯುವುದು ಮೂಲಕತೆ. ಆದರೆ ಈ ಚಿತ್ರದಲ್ಲಿ ತಾಯಿ ಪಾತ್ರ ಮಾಡಿದ ಹೆಸರಾಂತ ನಟಿ ರಾಖಿಗೆ ಹೀರೊ ಈ ರೀತಿಯ ಅಂತ್ಯ ಕಾಣುವುದು ಯಾಕೋ ಇಷ್ಟ ಆಗಲಿಲ್ಲವಂತೆ. ಈ ರೀತಿಯ ಅಂತ್ಯ ಪ್ರೇಕ್ಷಕರಿಗೆ ಇಷ್ಟ ಆಗದೇ ಹೋಗಬಹುದು ಎಂದು ಅವರು ಹೇಳಿದ್ದರಂತೆ.

ಜತೆಗೆ, ಚಿತ್ರದ ಅನೇಕ ವಿತರಕರು ಕೂಡ ಹೀರೊನನ್ನು ಸಾಯುವ ರೀತಿ ತೋರಿಸಬೇಡಿ, ಪೊಲೀಸರು ಆತನನ್ನು ಅರೆಸ್ಟ್ ಮಾಡುವ ರೀತಿ ಕತೆ ಬದಲಾಯಿಸಿ ಎಂದು ಒತ್ತಾಯಿಸಿದ್ದರಂತೆ. ಹೀಗಾಗಿ ಚಿತ್ರದ ಅಂತ್ಯವನ್ನು ಎರಡು ರೀತಿಯಲ್ಲಿ ಶೂಟಿಂಗ್ ಮಾಡಲಾಗಿತ್ತಂತೆ.

ಕೊನೆಗೆ ಮೂಲಕತೆಯನ್ನೇ ಅಂತ್ಯದಲ್ಲಿ ಉಳಿಸಿಕೊಳ್ಳಲು ನಿರ್ದೇಶಕರು ನಿರ್ಧರಿಸಿದರಂತೆ. ಇದಕ್ಕೆ ಅವರು ಕೊಟ್ಟ ಕಾರಣ ಪೊಲೀಸರು ಹೀರೊನನ್ನು ಹಿಡಿದರೆ ಅದು ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಕಾಡದೆ ಹೋಗುವ ಅಪಾಯವಿತ್ತು ಎನ್ನುವುದು. ಅದೇನೇ ಇರಲಿ ಬಾಜಿಗರ್ ಮಾತ್ರ ಬಾಲಿವುಡ್ನಲ್ಲಿ ಇತಿಹಾಸ ನಿರ್ಮಿಸಿದ್ದು ಮಾತ್ರ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...