alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್-ಬಿ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಅಮಿತಾಭ್ ಬಚ್ಚನ್ ಗುರುವಾರ ಬಾಲಿವುಡ್‍ನಲ್ಲಿ 50 ವರ್ಷ ಪೂರೈಸಿದ್ದಾರೆ. ಆದರೆ ಅವರು ಸೂಪರ್ ಸ್ಟಾರ್ ಪಟ್ಟದತ್ತ ದಾಪುಗಾಲು ಹಾಕುವ ಮೊದಲು ಚಿತ್ರರಂಗ ಪ್ರವೇಶಕ್ಕೆ ಅನೇಕ ಬಾರಿ ಪ್ರಯತ್ನಿಸಿದ್ದು ಕೆಲವೇ ಜನರಿಗೆ ಮಾತ್ರ ಗೊತ್ತು.

ಕೌನ್ ಬನೇಗಾ ಕರೋಡಪತಿ ಶೂಟಿಂಗ್ ವೇಳೆ ಅಮಿತಾಭ್ ಅವರಿಗೆ ಅವರ ಪ್ರಥಮ ಚಿತ್ರ ಸಾತ್ ಹಿಂದೂಸ್ತಾನಿ ಬಗ್ಗೆ ನೆನಪಿಸಿದಾಗ ತಮ್ಮ ಚಿತ್ರರಂಗ ಪ್ರವೇಶಕ್ಕೂ ಮುನ್ನ ನಡೆದ ಘಟನೆ ತಿಳಿಸಿದ್ದಾರೆ.

‘ನಾನು ಕೋಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದಾಗ ಪತ್ರಿಕೆಯಲ್ಲಿ ಜಾಹೀರಾತು ನೋಡಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕನೊಂದಿಗೆ ಕೆಲಸ ಮಾಡುವ ಅವಕಾಶ ಸಿಗಲಿದೆ ಎಂದು ಬರೆದಿತ್ತು. ಇದೊಂದು ಒಳ್ಳೆಯ ಅವಕಾಶವೆಂದು ಅರ್ಜಿ ಸಲ್ಲಿಸಿದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಮ್ಮೆ ತಂದೆಯೊಂದಿಗೆ ಮಾತನಾಡುತ್ತಿದ್ದಾಗ ಈ ಅವಕಾಶ ಕೈಚೆಲ್ಲಿದ ಬಗ್ಗೆ ತಿಳಿಸಿದ್ದೆ. ಆಗ ಅವರು, ಬಾಗಿಲು ಮುಚ್ಚಿರುವ ಯಾವುದಾದರೂ ಮನೆಯೊಳಗೆ ನುಗ್ಗಬೇಕಾದರೆ ಗೋಡೆ ಒಡೆದು ಒಳಗೆ ಹೋಗಬೇಕು ಎಂದಿದ್ದರು ಎಂದು ಅಮಿತಾಭ್ ನೆನಪಿಸಿಕೊಂಡರು.

ಕೆಬಿಸಿ ಶೋ ಸಂದರ್ಭದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಇಂಜಿನಿಯರ್ ರಸೂಲ್ ಪೂಕುಟ್ಟಿ ಅವರು, ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಕ್ಕೆ ಪುಸ್ತಕ ನೀಡಿ ಗೌರವಿಸಿದರು. ಈ ಪುಸ್ತಕದ ಮೊದಲ ಪುಟದಲ್ಲಿ ‘100 ವರ್ಷಗಳ ಭಾರತೀಯ ಚಿತ್ರರಂಗ ಮತ್ತು 50 ವರ್ಷಗಳ ಅಮಿತಾಭ್ ಬಚ್ಚನ್’ ಕುರಿತು ಬರೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...