alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕ್ಕ ವಯಸ್ಸಿನಲ್ಲೇ ರಜನಿಗೆ ತಾಯಿಯಾಗಿ ನಟಿಸಿದ್ರು ಶ್ರೀದೇವಿ…!

ಸೌತ್ ಸಿನಿ ದುನಿಯಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರೀದೇವಿ ಅಲ್ಲಿ ಅಕ್ಷರಶಃ ಮಹಾರಾಣಿಯಂತೆ ಮೆರೆದಿದ್ದು ಈಗ ಇತಿಹಾಸ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸುವ ಮೂಲಕ ಚಿತ್ರರಂಗದ ಕಣ್ಮಣಿಯಾಗಿದ್ದರು.

ಸಂಬಂಧಿ ಮೋಹಿತ್ ಮಾರ್ವಾ ವಿವಾಹ ಸಮಾರಂಭಕ್ಕೆ ಪತಿ ಬೋನಿ ಕಪೂರ್ ಹಾಗೂ ಎರಡನೇ ಪುತ್ರಿ ಖುಷಿ ಕಪೂರ್ ಜೊತೆ ಯುಎಇ ಗೆ ತೆರಳಿದ್ದ ಶ್ರೀದೇವಿ ಕಳೆದ ರಾತ್ರಿ ತೀವ್ರ ಹೃದಯಾಘಾತದಿಂದ ದುಬೈನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಹಿರಿಯ ನಟಿಯ ಆಕಾಲಿಕ ನಿಧನಕ್ಕೆ ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ದಿಗ್ಬ್ರಮೆಗೊಳಗಾಗಿದೆ. ನಟಿ ಸಾವಿನ ಕುರಿತು ಸಂತಾಪ ಸೂಚಕ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಮಗೆ ಸಿಕ್ಕ ಯಾವುದೇ ಪಾತ್ರಕ್ಕಾದರೂ ತಕ್ಕ ನ್ಯಾಯ ಒದಗಿಸುವ ಮೂಲಕ ಚಿತ್ರರಂಗದ ಕಣ್ಮಣಿಯಾಗಿದ್ದ ಶ್ರೀದೇವಿ 13 ನೇ ವಯಸ್ಸಿನಲ್ಲಿದ್ದಾಗ 25 ವರ್ಷದ ರಜನಿಕಾಂತ್ ಅವರ ತಾಯಿ ಪಾತ್ರ ವಹಿಸಿದ್ದರೆಂದರೇ ನೀವು ನಂಬಲೇಬೇಕು. 1976 ರಲ್ಲಿ ಬಿಡುಗಡೆಗೊಂಡಿದ್ದ ”ಮೂಂಡ್ರು ಮುಡಿಚ್ಚು” ಚಿತ್ರದಲ್ಲಿ ಶ್ರೀದೇವಿ, ರಜನಿಕಾಂತ್ ರವರ ಮಲತಾಯಿ ಪಾತ್ರ ನಿರ್ವಹಿಸಿದ್ದರು. ಶ್ರೀದೇವಿಯವರ ಆಕಾಲಿಕ ಸಾವಿನ ಬಳಿಕ ಹಳೆಯ ನೆನಪುಗಳು ಚಿತ್ರಪ್ರೇಮಿಗಳಲ್ಲಿ ಮರುಕಳಿಸುತ್ತಿದ್ದು, ಅವರ ಅಭಿನಯವನ್ನು ಮತ್ತೊಮ್ಮೆ ಮೆಲುಕು ಹಾಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...