alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರೇಯಸಿಗೆ ಮೊದಲು ಗೊತ್ತಾಯ್ತು ನಟನ ಪತ್ನಿಯ ವಿಷಯ

shahid-mira-kareena 13

ನವದೆಹಲಿ: ತಾರಾ ಜೋಡಿಗಳಾದ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಾಂಪತ್ಯ ಜೀವನಕ್ಕೆ ಸುಂದರ ತಿರುವು ಸಿಕ್ಕಿದೆ. ಕಳೆದ ವರ್ಷ ಶಾಹಿದ್ ಹಾಗೂ ಮೀರಾ ಮದುವೆಯಾಗಿದ್ದು, ಮೀರಾ ಈಗ ಗರ್ಭಿಣಿಯಾಗಿದ್ದಾರೆ.

ಮೀರಾ ಗರ್ಭಿಣಿಯಾದ ವಿಷಯ ಮೊದಲು ಗೊತ್ತಾಗಿದ್ದು, ಶಾಹಿದ್ ಮಾಜಿ ಪ್ರೇಯಸಿ ಕರೀನಾ ಕಪೂರ್ ಗೆ ಎನ್ನುವುದು ವಿಶೇಷ. ಶಾಹಿದ್ ಕಪೂರ್ ಕುಟುಂಬದವರು ಈ ವಿಷಯವನ್ನು ಹಂಚಿಕೊಳ್ಳುವ ಮೊದಲೇ, ಅಲ್ಲದೇ, ಮಾಧ್ಯಮಗಳಿಗಿಂತ ಮುನ್ನವೇ, ಶಾಹಿದ್ ಮಾಜಿ ಪ್ರೇಯಸಿ ಕರೀನಾಗೆ ಈ ವಿಷಯ ಗೊತ್ತಾಗಿದೆ. ಶಾಹೀದ್ ‘ರಂಗೂನ್’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಕರೀನಾ ಪತಿ ಸೈಫ್ ಆಲಿ ಖಾನ್ ಕೂಡ ನಟಿಸಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ಶಾಹಿದ್, ಪತ್ನಿ ಗರ್ಭಿಣಿಯಾದ ವಿಚಾರವನ್ನು ಸೈಫ್ ಗೆ ಹೇಳಿದ್ದಾರೆ.

ಸೈಫ್ ಆಲಿ ಖಾನ್ ತಡಮಾಡದೇ ಪತ್ನಿ ಕರೀನಾಗೆ ಈ ವಿಷಯ ತಿಳಿಸಿದ್ದಾರೆ. ಕರೀನಾ ಹಾಗೂ ಸೈಫ್ ಮದುವೆಯಾಗಿ ವರ್ಷಗಳೇ ಕಳೆದರೂ, ಸದ್ಯಕ್ಕೆ ಮಗು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮಾಜಿ ಪ್ರಿಯಕರನ ಪತ್ನಿ ಗರ್ಭಿಣಿಯಾಗಿದ್ದಕ್ಕೆ ಕರೀನಾ ಖುಷಿಪಟ್ಟಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...