alex Certify
ಕನ್ನಡ ದುನಿಯಾ       Mobile App
       

Kannada Duniya

ಗುಟ್ಟಾಗಿ ಮದುವೆಯಾಗಿದ್ದರಾ ಪ್ರಿಯಾಂಕಾ-ನಿಕ್…?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ – ನಿಕ್ ಜೋನಸ್ ನಡುವೆ ಪ್ರೇಮಾಂಕುರಗೊಂಡು ಹಲವು ಡೇಟಿಂಗ್ ಗಳು ಇದೀಗ ರಹಸ್ಯವಾಗಿ ಉಳಿದಿಲ್ಲ. ಆದರೀಗ ಲಾಸ್ ವೇಗಸ್ ನಲ್ಲಿ ಇಬ್ಬರು ವಿವಾಹವಾಗಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್ ವಲಯದಲ್ಲಿ ಆರಂಭಗೊಂಡಿದೆ.

ಇಷ್ಟು ದಿನಗಳ‌ವರೆಗೆ ಇಬ್ಬರು ಜೋದ್ಪುರದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎಂದೇ ಅನೇಕರು ಭಾವಿಸಿದ್ದರು. ಆದರೀಗ ಐರಿಷ್ ನಟ ಎಮ್ಮೆಟ್ ಹ್ಯೂಸ್ ಶೇರ್ ಮಾಡಿರುವ ಫೋಟೋವನ್ನು ನೋಡಿದರೆ ಇಬ್ಬರು ಗುಪ್ತವಾಗಿ ಲಾಸ್ ವೇಗಸ್ ನಲ್ಲಿ ಮದುವೆಯಾಗಿರುವ ಅನುಮಾನಗಳು ದಟ್ಟವಾಗಿದೆ.

ಹ್ಯೂಸ್ ಇನ್ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿರುವ ‌ಫೋಟೋದಲ್ಲಿ ನವಜೋಡಿಗಳ‌ ರೀತಿ ಕಾಣಿಸುತ್ತಿರುವ ಪ್ರಿಯಾಂಕ ಹಾಗೂ ನಿಕ್ ಜೋಡಿ‌ ಲಿಟಲ್ ವೀಗಸ್ ಚ್ಯಾಪೆಲ್ ಮುಂಭಾಗ ಪೋಸ್ ನೀಡಿದ್ದಾರೆ. ಇದರೊಂದಿಗೆ ಇದೇ ಫೋಟೊದಲ್ಲಿ ಪ್ರಿಯಾಂಕ ಹೂಗುಚ್ಛವೊಂದನ್ನು ಹಿಡಿದುಕೊಂಡಿರುವುದು ಈ ಎಲ್ಲ ಅನುಮಾನಗಳಿಗೆ ಕಾರಣವಾಗಿದೆ.

ಈಗಾಗಲೇ ಚೋಪ್ರಾ ಅವರು ಲಾಸ್ ವೇಗಸ್ ನಲ್ಲಿ ನಡೆಯುತ್ತಿರುವ ಜೆ.ಎಲ್.ಬಿ. ಫೆಸ್ಟ್ ನಲ್ಲಿ‌ ಕಂಗೊಳಿಸಿದ್ದ ಫೋಟೊ ವೈರಲ್ ಆಗಿದೆ. ಇದೇ ವೇಳೆಗೆ ನಿಕ್ ಲಾಸ್ ವೇಗಸ್ ಗೆ ತೆರಳಿ ಅಲ್ಲಿಯೇ ಮದುವೆಯಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...