alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತದೇ ಕೆಲಸ ಮಾಡಿದ್ದಾರೆ ನಟಿ ದಿಯಾ ಮಿರ್ಜಾ

ಸೆಲೆಬ್ರಿಟಿಗಳು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಹೊಸದೇನಲ್ಲ. ಕೆಲ ಖ್ಯಾತನಾಮರು ಇದಕ್ಕೆಂದೇ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೈ ಜೋಡಿಸಿದ್ದಾರೆ. ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡಾ ಭಾನುವಾರದಂದು ಇಂತಹ ಒಂದು ಸಾರ್ಥಕ ಕಾರ್ಯದಲ್ಲಿ ಮತ್ತೊಮ್ಮೆ ತಮ್ಮನ್ನು ತೊಡಗಿಸಿಕೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಭಾನುವಾರ ವಿಶ್ವ ಭೂಮಿ ದಿನವನ್ನು ಎಲ್ಲೆಡೆ ಆಚರಿಸಲಾಗಿದ್ದು, ಅದರಂತೆ ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿರುವ ನಟಿ ದಿಯಾ ಮಿರ್ಜಾ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರೊಂದಿಗೆ ಮುಂಬೈನ ದಾದರ್ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡಿದ್ದರು.

ಸಾವಿರಾರು ಮಂದಿ ಸಾರ್ವಜನಿಕರ ಜೊತೆ ಯುವ ಸೇನೆ ಅಧ್ಯಕ್ಷ ಆದಿತ್ಯ ಠಾಕ್ರೆ ಕೂಡಾ ದಿಯಾ ಮಿರ್ಜಾರಿಗೆ ಈ ಕಾರ್ಯದಲ್ಲಿ ಸಾಥ್ ನೀಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ದಿಯಾ ಮಿರ್ಜಾ, ಪ್ರತಿಯೊಬ್ಬರು ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ವಿಶ್ವ ಭೂಮಿ ದಿನವನ್ನು ತಮ್ಮದೇ ಹುಟ್ಟು ಹಬ್ಬದಂತೆ ಪ್ರತಿಯೊಬ್ಬರು ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಆಚರಿಸಬೇಕೆಂದು ಹೇಳಿದರು. ದಿಯಾ ಮಿರ್ಜಾ ಈ ಹಿಂದೆಯೂ ಇಂತಹ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...