alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಂಚಕ್ ಪೂಜಾ ಅರೆಸ್ಟ್ ಮಾಡಲು ಪೊಲೀಸರು ರೆಡಿ

dhinchak_1498637900_725x725

ಜಗತ್ತಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ಪ್ರತಿನಿತ್ಯವೂ ನಡೆಯುತ್ತಿವೆ. ಡಿಂಚಕ್ ಪೂಜಾ ಕೂಡ ಮನೆಮಾತಾಗಿರುವುದೇ ಇದಕ್ಕೆ ಸಾಕ್ಷಿ. ಸಾಮಾಜಿಕ ತಾಣಗಳಲ್ಲೂ ಅವಳದ್ದೇ ಸುದ್ದಿ. ಡಿಂಚಕ್ ಅದೆಷ್ಟು ಫೇಮಸ್ ಆಗಿದ್ದಾಳೆ ಅಂದ್ರೆ ದೆಹಲಿ ಪೊಲೀಸರು ಕೂಡ ಅವಳ ಹಾಡನ್ನು ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿದ್ದೇ ತಡ ಡಿಂಚಕ್ ಪೂಜಾಳನ್ನು ಅರೆಸ್ಟ್ ಮಾಡಲು ರೆಡಿಯಾಗಿದ್ದಾರೆ. ಇದಕ್ಕೆ ಕಾರಣ ಹೆಲ್ಮೆಟ್ ಧರಿಸದೇ ಆಕೆ ಸ್ಕೂಟರ್ ಓಡಿಸಿರೋದು. ಟ್ವಿಟ್ಟರ್ ನಲ್ಲಿ ವ್ಯಕ್ತಿಯೊಬ್ಬ ಪೂಜಾಳ ವಿಡಿಯೋವನ್ನು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದ, ಹೆಲ್ಮೆಟ್ ಹಾಕದ ಅವಳನ್ನು ಬಂಧಿಸುವಂತೆ ಒತ್ತಾಯಿಸಿದ್ದ.

ದಿಲೋಂಕಾ ಶೂಟರ್ ಸ್ಕೂಟರ್ ಅಂತಾ ಹಾಡು ಹೇಳ್ಕೊಂಡು ಹೆಲ್ಮೆಟ್ ಕೂಡ ಹಾಕದೇ ರಸ್ತೆ ತುಂಬಾ ಗಾಡಿ ಓಡಿಸಿರೋ ಡಿಂಚಕ್ ಸದ್ಯದಲ್ಲೇ ಅರೆಸ್ಟ್ ಆಗೋದು ಗ್ಯಾರಂಟಿ. ಸೂರಜ್ ಮಲ್ ವಿಹಾರ್ ನಲ್ಲಿ ಜೋರಾಗಿ ಹಾಡು ಹೇಳಿಕೊಂಡು ಡಿಂಚಕ್ ಈ ಕಸರತ್ತು ಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...