alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಭ್ ಮೇಲೆ ನಟ ಧರ್ಮೇಂದ್ರಗೆ ಮುನಿಸ್ಯಾಕೆ…?

ಶೋಲೆ ಚಿತ್ರದ ಜೈ ಮತ್ತು ವೀರು ಸ್ನೇಹ ಬಾಲಿವುಡ್ ನಲ್ಲಿ ಇಂದಿಗೂ ಅಜರಾಮರವಾಗಿ ಉಳಿದಿದೆ. ಆದ್ರೆ ಧರ್ಮೇಂದ್ರ ಮಾತ್ರ ಅಮಿತಾಭ್ ಬಚ್ಚನ್ ಮೇಲೆ ಮುನಿಸಿಕೊಂಡಿದ್ದಾರೆ. ಶೋಲೆ ಚಿತ್ರಕ್ಕಾಗಿ ಅಮಿತಾಭ್ ಬಚ್ಚನ್ ರನ್ನು ಖುದ್ದು ಧರ್ಮೇಂದ್ರ ಶಿಫಾರಸು ಮಾಡಿದ್ದರಂತೆ.

ಅದನ್ನು ಈಗ ಬಿಗ್ ಬಿ ಅರ್ಥಮಾಡಿಕೊಂಡಿದ್ದಾರೆ ಅಂತಾ ಧರ್ಮೇಂದ್ರ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಧರ್ಮೇಂದ್ರ ನನ್ನ ಹೆಸರನ್ನು ಶಿಫಾರಸು ಮಾಡಿದ್ದರು ಅಂತಾ ಈಗ ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ, ಹಾಗಾಗಿ ಜನರು ಬಿಗ್ ಬಿ ಎಷ್ಟು ಗ್ರೇಟ್, ಅದರಲ್ಲಿ ಮುಚ್ಚುಮರೆ ಮಾಡ್ತಿಲ್ಲ ಅಂತಾ ಅಂದುಕೊಳ್ತಾರೆಯೇ ಹೊರತು ನನ್ನ ಬಗ್ಗೆ ಆ ರೀತಿಯ ಭಾವನೆಗಳು ಮೂಡುವುದಿಲ್ಲ ಅನ್ನೋದು ಧರ್ಮೇಂದ್ರರ ಅಳಲು.

ದಶಕಗಳಿಂದ್ಲೂ ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಧರ್ಮೇಂದ್ರ 300ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಆದ್ರೆ ಒಮ್ಮೆಯೂ ಅವರಿಗೆ ಅತ್ಯುತ್ತಮ ನಟ ಅನ್ನೋ ಪ್ರಶಸ್ತಿ ಬಂದಿಲ್ಲ. ಜೀವಮಾನ ಸಾಧನೆಗಾಗಿ ಅವರನ್ನು ಸನ್ಮಾನಿಸಲಾಗಿದೆ ಅಷ್ಟೆ. ಚಿತ್ರರಂಗ ಈಗ ತರಕಾರಿ ಮಂಡಿಯಂತಾಗಿದೆ ಅಂತಾನೂ ಧರ್ಮೇಂದ್ರ ಅಸಮಾಧಾನ ಹೊರಹಾಕಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...