alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಹೇಮಮಾಲಿನಿ ಪರ ಪತಿ ಧರ್ಮೇಂದ್ರ ಮತ ಪ್ರಚಾರ

ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಪರ ಪತಿ ಧರ್ಮೇಂದ್ರ ಇಂದು ಪ್ರಚಾರ ನಡೆಸಿದರು.

ಮಥುರಾ ಲೋಕಸಭಾ ಕ್ಷೇತ್ರದ ಸೊನಕ್ ನಗರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ 83 ವರ್ಷದ ಧರ್ಮೇಂದ್ರ ಯಾರ ಮಾತಿಗೂ ಕಿವಿಗೊಡದೆ ನಟಿ ಹೇಮಮಾಲಿನಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

2014 ರಲ್ಲಿ ಹೇಮಮಾಲಿನಿಯನ್ನ ಅಭೂತಪೂರ್ವವಾಗಿ ಗೆಲ್ಲಿಸಿಕೊಟ್ಟಿದ್ದಕ್ಕೆ ಧರ್ಮೇಂದ್ರ ಧನ್ಯವಾದಗಳನ್ನ ತಿಳಿಸಿದರು. ಮಥುರಾದ ಹಾಗೂ ದೇಶದ ನಾಳಿನ ಉಜ್ವಲ ಭವಿಷ್ಯಕ್ಕೆ ಹೇಮಮಾಲಿನಿಗೆ ಮತ ಹಾಕುವಂತೆ ವಿನಂತಿಸಿದರು.

ನಾನು ಒಬ್ಬ ರೈತನ ಮಗ ಎಂದು ಹೇಳಿದ ಧರ್ಮೇಂದ್ರ, ನನ್ನ ತಂದೆ ಶಿಕ್ಷಕನಾದರೂ ರೈತಾಪಿ ಕೆಲಸ ಮಾಡಿ ಅನುಭವವಿದೆ. ಈ ಸಂದರ್ಭದಲ್ಲಿ ನಾನು ಸಹ ನಮ್ಮ ತಂದೆ ಕೈಜೋಡಿಸಿದ್ದೇನೆ. ಬೆಳೆ ಬೆಳೆಯೋದು ಹೇಗೆ, ಕಳೆ ತೆಗೆಯೋದು ಹೇಗೆ, ಆಕಳಿಗೆ ಹುಲ್ಲು ಮೇಯಿಸುವುದು ಹೇಗೆ ಎಂಬುದರ ಬಗ್ಗೆ ನನಗೂ ಅನುಭವವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶೋಲೇ ಸಿನಿಮಾದ ಹೆಸರುವಾಸಿ ಡೈಲಾಗ್ ಹೇಳುವ ಮೂಲಕ ಧರ್ಮೇಂದ್ರ ಮತದಾರರನ್ನ ರಂಜಿಸಿದರು. ಹೇಮಾಮಾಲಿಯವರನ್ನ ಈ ಬಾರಿ‌ ಮತ್ತೆ ಗೆಲ್ಲಿಸಿದಲ್ಲಿ ನಾನು ಮತ್ತೊಮ್ಮೆ ಮಥುರಾಕ್ಕೆ ಬರುವೆ. ರೈತರೊಂದಿಗೆ ಊಟ ಮಾಡಲಿದ್ದೇನೆ ಎಂದರು.

ಉತ್ತರ ಪ್ರದೇಶದಲ್ಲಿ ಏ.18 ರಂದು ಗುರುವಾರ ಮೂರನೆ ಹಂತದ ಚುನಾವಣೆ ನಡೆಯಲಿದ್ದು, ಮಥುರಾ ಲೋಕಸಭಾ ಕ್ಷೇತ್ರದ ಚುನಾವಣೆ ಅಂದು ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...