alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಪುತ್ರಿಯ ಮೊದಲ ಚಿತ್ರದ ಟ್ರೈಲರ್ ರಿಲೀಸ್

ಖ್ಯಾತ ಬಾಲಿವುಡ್ ನಟಿ ದಿವಂಗತ ಶ್ರೀದೇವಿಯವರ ಪುತ್ರಿ ಜಾಹ್ನವಿ ಕಪೂರ್, ‘ಧಡಕ್’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದು, ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್ ಆಗಿರುವ ‘ಧಡಕ್’ ನಲ್ಲಿ ಇಶಾನ್ ಖಟ್ಟರ್ ನಾಯಕನಾಗಿದ್ದು, ಜಾಹ್ನವಿ ಹಾಗೂ ಇಶಾನ್ ಇಬ್ಬರಿಗೂ ಇದು ಮೊದಲ ಚಿತ್ರವಾಗಿದೆ. ಧರ್ಮಾ ಪ್ರೊಡಕ್ಷನ್ ಲಾಂಛನದಲ್ಲಿ ಕರಣ್ ಜೋಹರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ‘ಧಡಕ್’ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಟ್ರೈಲರ್ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...