alex Certify
ಕನ್ನಡ ದುನಿಯಾ       Mobile App
       

Kannada Duniya

`ಕಾಫಿ ವಿತ್ ಕರಣ್’ ಮೊದಲ ಸಂಚಿಕೆಯಲ್ಲಿ ಮಿಂಚಲಿದೆ ಈ ಜೋಡಿ

ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಕರಣ್ ಜೋಹರ್ ನಿರೂಪಣೆಯ ಕಾಫಿ ವಿತ್ ಕರಣ್ ಶೋ ಮತ್ತೆ ಶುರುವಾಗಲಿದೆ. ಕಾಫಿ ವಿತ್ ಕರಣ್ ಆರನೇ ಆವೃತ್ತಿಯ ಬಗ್ಗೆ ಸುಳಿವು ಸಿಕ್ಕಿದೆ. ಶೋನ ಮೊದಲ ಸಂಚಿಕೆಯಲ್ಲಿ ಯಾರು ಕಾಣಿಸಲಿದ್ದಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕರಣ್ ತನ್ನ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜೋಡಿಯನ್ನೇ ಮೊದಲ ಸಂಚಿಕೆಯಲ್ಲಿ ಸಂದರ್ಶಿಸಿಲಿದ್ದಾರೆ.

ಬಾಲಿವುಡ್ ನಟ ಇಶಾನ್ ಹಾಗೂ ನಟಿ ಜಾಹ್ನವಿ ಕಪೂರ್ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಬಾಲಿವುಡ್ ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದಾಳೆ. ಚಿತ್ರ ಭರ್ಜರಿ ಯಶಸ್ಸು ಕಾಣ್ತಿದೆ. ಈಗಾಗಲೇ 100 ಕೋಟಿ ಗಳಿಕೆ ಕಂಡಿದ್ದು, ಚಿತ್ರದ ಓಟ ಮುಂದುವರೆದಿದೆ.

ಮೂಲಗಳ ಪ್ರಕಾರ, ಕರಣ್ ಶೋ ಕಾಫಿ ವಿತ್ ಕರಣ್ ನ ಮೊದಲ ಸಂಚಿಕೆಯಲ್ಲಿಯೇ ಜಾಹ್ನವಿ ಹಾಗೂ ಇಶಾನ್ ಕಾಣಿಸಲಿದ್ದಾರಂತೆ. ಖಾಸಗಿ ಹಾಗೂ ತಮಾಷೆ ಪ್ರಶ್ನೆಗಳಿಗೆ ಕರಣ್ ಶೋ ಪ್ರಸಿದ್ಧಿ ಪಡೆದಿದೆ. ಜಾಹ್ನವಿ ಧಡಕ್ ಮೂಲಕ ಧಮಾಲ್ ಮಾಡಿದ್ದು, ಕರಣ್ ಶೋನಲ್ಲಿ ತಾಯಿ ಹಾಗೂ ತನ್ನ ಮಧ್ಯೆಯಿದ್ದ ಪ್ರೀತಿ, ಮುನಿಸಿನ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ. ಧಡಕ್ ಚಿತ್ರದಲ್ಲಿ ಜಾಹ್ನವಿ ಅದ್ಭುತವಾಗಿ ನಟಿಸಿದ್ದಾಳೆ. ಕರಣ್ ನಿರ್ಮಾಣದ ಹೊಣೆ ಹೊತ್ತಿದ್ರೆ ಶಶಾಂಕ್ ಚಿತ್ರವನ್ನು ನಿರ್ದೇಶನ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...