alex Certify
ಕನ್ನಡ ದುನಿಯಾ       Mobile App
       

Kannada Duniya

ಧಡಕ್ ಚಿತ್ರದ ಹೊಸ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಜಾಹ್ನವಿ

ಬಾಲಿವುಡ್ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಧಡಕ್ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಜಾಹ್ನವಿ ಈ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾಳೆ. ಚಿತ್ರದ ಟ್ರೈಲರ್ ಗೆ ಫುಲ್ ಮಾರ್ಕ್ಸ್ ಸಿಕ್ಕಿದ್ದು ಈಗ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.

ಜಾಹ್ನವಿ ಕಪೂರ್ ಹಾಗೂ ಇಶಾನ್ ಖಟ್ಟರ್ ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡನ್ನು ಫರಾಹ್ ಖಾನ್ ಸಂಯೋಜನೆ ಮಾಡಿದ್ದಾರೆ. ಮರಾಠಿಯಲ್ಲಿ ಹಿಟ್ ಆಗಿದ್ದ ಈ ಹಾಡಿನ ಹಿಂದಿ ಆವೃತ್ತಿ ಹೇಗಿರುತ್ತೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅಜಯ್-ಅತುಲ್ ಹಾಡಿಗೆ ದನಿಯಾಗಿದ್ದಾರೆ. ಇವರೇ ಮ್ಯೂಸಿಕ್ ನೀಡಿದ್ದಾರೆ.

ಮರಾಠಿಯಂತೆ ಹಿಂದಿ ಆವೃತ್ತಿಗೂ ಅಭಿಮಾನಿಗಳು ಫುಲ್ ಮಾಕ್ಸ್ ನೀಡುವ ಸಾಧ್ಯತೆಯಿದೆ. ಮರಾಠಿಯ ಹಾಡನ್ನು 11 ಕೋಟಿಗೂ ಹೆಚ್ಚು ಜನ ಚಿತ್ರ ಬಿಡುಗಡೆಗೂ ಮುನ್ನವೇ ವೀಕ್ಷಣೆ ಮಾಡಿದ್ದರು. ಕರಣ್ ಜೋಹರ್ ನಿರ್ದೇಶನದ ಧಡಕ್ ಚಿತ್ರ ಇದೇ ಜುಲೈ 20ರಂದು ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...