alex Certify
ಕನ್ನಡ ದುನಿಯಾ       Mobile App
       

Kannada Duniya

‘ಧಡಕ್’ ಚಿತ್ರದ ಕ್ಲೈಮ್ಯಾಕ್ಸ್ ಹೇಳಿದ್ಲು ಜಾಹ್ನವಿ ಕಪೂರ್…!

ಹಿರಿಯ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಧಡಕ್ ಚಿತ್ರ ಶುಕ್ರವಾರ ತೆರೆಗೆ ಬರ್ತಿದೆ. ಚಿತ್ರ ಮರಾಠಿ ಚಿತ್ರ ಸೈರಾಟ್ ರಿಮೇಕ್ ಎಂಬುದು ಎಲ್ಲರಿಗೂ ಗೊತ್ತು. ಚಿತ್ರದ ಟ್ರೇಲರ್ ಚಿತ್ರ ಕಥೆಯನ್ನು ಸ್ಪಷ್ಟಪಡಿಸಿದೆ. ಆದ್ರೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಎದ್ದಿತ್ತು.

ಸೈರಾಟ್ ಚಿತ್ರದಂತೆ ಧಡಕ್ ಚಿತ್ರ ಕ್ಲೈಮ್ಯಾಕ್ಸ್ ಕೂಡ ದುಃಖಕರವಾಗಿರುತ್ತಾ ಎಂಬ ಪ್ರಶ್ನೆಗೆ ಚಿತ್ರ ಬಿಡುಗಡೆಯಾದ ನಂತ್ರವೇ ಉತ್ತರ ಸಿಗಬೇಕಿದೆ. ಆದ್ರೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಜಾಹ್ನವಿ ಕ್ಲೈಮ್ಯಾಕ್ಸ್ ಬಗ್ಗೆ ಸುಳಿವು ನೀಡಿದ್ದಾಳೆ.

ಧಡಕ್ ಚಿತ್ರ ಸಾಮಾನ್ಯ ಬಾಲಿವುಡ್ ಚಿತ್ರದಂತಲ್ಲ. ಕಹಿ ಸತ್ಯವನ್ನು ಮರೆಮಾಚಿ ಮಸಾಲೆ ಚಿತ್ರ ನಿರ್ಮಾಣ ಮಾಡಲಾಗಿಲ್ಲ. ಕೊನೆಯಲ್ಲಿ ಪಾಲಕರು ಒಪ್ಪಿ ಸುಖಾಂತ್ಯ ಕಾಣುವ ಚಿತ್ರಗಳಂತೆ ಇದಲ್ಲ. ಧಡಕ್ ಜೀವನದ ಸತ್ಯವನ್ನು ಹೇಳುತ್ತದೆ ಎಂದು ಜಾಹ್ನವಿ ಹೇಳಿದ್ದಾಳೆ.

ಚಿತ್ರದ ಮೂಲಕ ಜಾಹ್ನವಿ ಹಾಗೂ ಇಷಾನ್ ಬಾಲಿವುಡ್ ಗೆ ಎಂಟ್ರಿಯಾಗಲಿದ್ದಾರೆ. ಮರಾಠಿ ಚಿತ್ರ ಸೈರಾಟ್ ಸೂಪರ್ ಹಿಟ್ ಆಗಿತ್ತು. ಅದ್ರ ರಿಮೇಕ್ ಧಡಕ್ ಚಿತ್ರದ ಟ್ರೇಲರ್ ಹಾಗೂ ಹಾಡನ್ನು ಅಭಿಮಾನಿಗಳು ಇಷ್ಟಪಡ್ತಿದ್ದಾರೆ. ಎಷ್ಟರ ಮಟ್ಟಿಗೆ ಚಿತ್ರ ಯಶಸ್ಸು ಕಾಣಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...